ಬೆಳಗಾಗುವಷ್ಟರಲ್ಲಿ ಕೆಂಪು ಬಣ್ಣದಲ್ಲಿ ಬದಲಾದ ಗುಂಬಜ್ ಮಾದರಿಯ ಬಸ್ ನಿಲ್ದಾಣ; ದಿನಕ್ಕೊಂದು ಸ್ವರೂಪದಲ್ಲಿ ತಂಗುದಾಣ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳು ದಿನಕ್ಕೊಂದು ವಿವಾದಕ್ಕೆ ಕಾರಣವಾಗಿದ್ದು ಇದೀಗ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್ ಗಳ ಬಣ್ಣವೇ ಬದಲಾಗಿ ಹೋಗಿದೆ.
ಮೈಸೂರಿನ ಜೆ ಎಸೆಸ್ ಕಾಲೇಜು ಮುಂಭಾಗ ಹಾಗೂ ಮೈಸೂರು-ಊಟಿ ರಸ್ತೆಯಲ್ಲಿರುವ ಬಸ್ ತಂಗುದಾಣಗಳ ಮೇಲೆ ಬಂಗಾರದ ಬಣ್ಣದಲ್ಲಿದ್ದ ಗುಂಬಜ್ ಬಣ್ಣ ರಾತ್ರೋರಾತ್ರಿ ಬದಲಾಗಿದ್ದು, ಕೆಂಪು ಬಣ್ಣಕ್ಕೆ ಮಾರ್ಪಾಟಾಗಿದೆ.
ಬಸ್ ನಿಲ್ದಾಣ ಈಗ ರಾಜಕೀಯ ಪಕ್ಷಗಳು ಹಾಗೂ ನಾಯಕರ ಪ್ರತಿಷ್ಠೆಗೆ ಸಿಲುಕಿ ದಿನಕ್ಕೊಂದು ಸ್ವರೂಪದಲ್ಲಿ ಮಾರ್ಪಾಡಾಗುತ್ತಿದೆ. ಗುಂಬಜ್ ಮಾದರಿಯ ಬಸ್ ನಿಲ್ದಾಣದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಸ್ ನಿಲ್ದಾಣಗಲ ಮೇಲಿನ ಗುಂಬಜ್ ನ್ನು 4 ದಿನಗಳಲ್ಲಿ ತೆರವುಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ ಜಲ್ಲಾಡಳಿತಕ್ಕೆ ಗಡುವು ನೀಡಿದ್ದರು. ರಾಜ್ಯ ಸರ್ಕಾರವೇ ನಿರ್ಮಾಣ ಮಾಡಿರುವ, ಅಧಿಕಾರಿಗಳು ನೀಲನಕ್ಷೆ ಸಿದ್ಧಪಡಿಸಿ ನಿರ್ಮಿಸಿದ್ದ ಬಸ್ ನಿಲ್ದಾಣಕ್ಕೆ ಈಗ ಆಕ್ಷೇಪ ಮಾಡುತ್ತಿರುವುದು ಬಿಜೆಪಿ ಕೊಳಕು ರಾಜಕೀಯ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.
ಈಗ ನಿನ್ನೆ ಹೊನ್ನಿನ ಬಣ್ಣದಲ್ಲಿದ್ದ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್ ಗಳು ಇಂದು ಕೆಂಪು ಬಣ್ಣದಲ್ಲಿ ಹೊಳೆಯುತ್ತಿವೆ. ಬೆಳಗಾಗುವಷ್ಟರಲ್ಲಿ ಗುಂಬಜ್ ಗಳಿಗೆ ಕೆಂಪು ಬಣ್ಣ ಹಚ್ಚಿ, ಅರಮನೆ ಮಾದರಿಯಲ್ಲಿ ಗೋಚರಿಸುವಂತೆ ಮಾಡಲಾಗಿದೆ.
ರಾಜ್ಯ ಸರ್ಕಾರದಿಂದ ಮತದಾರರ ಮಾಹಿತಿ ಕಳ್ಳತನ; ಕಾಂಗ್ರೆಸ್ ಗಂಭೀರ ಆರೋಪ
https://pragati.taskdun.com/voter-id-misusesiddaramaiah-d-k-shivakumarpress-meetbjp-govt/