Kannada NewsKarnataka NewsNationalWorld
*ಎರಡು ಅಂತಸ್ತಿನ ಮನೆಗೆ ಅಪ್ಪಳಿಸಿದ ಕಾರ್ಗೋ ವಿಮಾನ*

ಪ್ರಗತಿವಾಹಿನಿ ಸುದ್ದಿ: ಜರ್ಮನಿಯ ಲೀಪ್ ಜಿಗ್ನಿಂದ ವಿಲ್ಸಿಯಸ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರ್ಗೋ ವಿಮಾನವು ಪತನವಾಗಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಯುರೋಪ್ ನ ಲಿಥುವೇನಿಯಾದ ವಿಲ್ಲಿಯಸ್ ವಿಮಾನ ನಿಲ್ದಾಣದ ಬಳಿ ಡಿಎಚ್ ಎಲ್ ಕಾರ್ಗೋ ವಿಮಾನ ಪತನಗೊಂಡಿದೆ. ಲಿಥುವೇನಿಯನ್ ವಿಮಾನ ನಿಲ್ದಾಣ ಪ್ರಾಧಿಕಾರವು ಪತನವಾದ ವಿಮಾನವು ಜರ್ಮನಿಯ ಲೀಪ್ ಜಿಗ್ನಿಂದ ವಿಲ್ಸಿಯಸ್ ವಿಮಾನ ನಿಲ್ದಾಣಕ್ಕೆ ಹಾರುತ್ತಿತ್ತು. ಈ ವೇಳೆ ವಿಲ್ಸಿಯಸ್ ವಿಮಾನ ನಿಲ್ದಾಣದ ಸಮೀಪವಿರುವ ಎರಡು ಅಂತಸ್ತಿನ ಮನೆಗೆ ಅಪ್ಪಳಿಸಿತು ಎಂದು ತಿಳಿಸಿದೆ.
ಘಟನೆ ನಡೆದ ಕೂಡಲೇ ಲಿಥುವೇನಿಯಾ ಅಗ್ನಿಶಾಮಕ ದಳದವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಜೊತೆಗೆ ಪೊಲೀಸರು ಹಾಗೂ ಅಂಬುಲೆನ್ಸ್ ಕೂಡ ಸ್ಥಳಕ್ಕೆ ದೌಡಾಯಿಸಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದರೆ, ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂಬುದಾಗಿ ವರದಿಯಾಗಿದೆ.



