ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2022ರ ಹಳೆಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣ ರಾಜ್ಯ ಸರ್ಕಾರವು ಹಿಂಪಡೆದು ಆರೋಪಿಗಳನ್ನು ಮುಕ್ತಗೊಳಿಸುತ್ತಿರುವ ಕ್ರಮ ಖಂಡಿಸಿ, ಬೆಳಗಾವಿಯ ವಿವಿಧ ಸಮಾಜದ ಪ್ರಮುಖರು, ಗಣ್ಯರು, ದೇವಸ್ಥಾನದ ಆಡಳಿತಮಂಡಳಿಯ ಸದಸ್ಯರು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ನಾಗರಿಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲ ಅವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಮತಗಳ ಓಲೈಕೆಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ . ಕಾನೂನು ಬಾಹಿರ ಮತ್ತು ಸಮಾಜಘಾತುಕ ಶಕ್ತಿಗಳ ಸದೆಬಡೆದು ಉತ್ತಮ ಕಾನೂನು ಸುವ್ಯವಸ್ಥೆ ಸಮಾಜದಲ್ಲಿ ಸ್ಥಾಪಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅತ್ಯಂತ ಬೇಜವಾಬ್ದಾರಿ ಮತ್ತು ಅಸಂವಿಧಾನಿಕ ನಡೆಯಲ್ಲಿ ನಿರತವಾಗಿದೆ ಎಂದು ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದರು.
ರೋಹನ ಜುವಳಿ ಮಾತನಾಡಿ, ದೇಶ ಸಮಾಜ ರಕ್ಷಿಸಲು ಇರುವ ಪೋಲೀಸರ, ಮಿಲಟರಿಯವರ ಮೇಲೆಯೆ ದಾಳಿ ಮಾಡುತ್ತಾ ಹೋದರೆ ಸಮಾಜ ಹೇಗೆ ಸುಧಾರಿಸಲು ಹೇಗೆ ಸಾಧ್ಯ? ಹಾಗಾಗಿ ಎಲ್ಲಾ ಹಿಂದೂ ಸಮಾಜ ಇದನ್ನು ಖಂಡಿಸುತ್ತದೆ ಎಂದರು.
ಸತೀಶ ಬಾಚೀರ್ಕ್ ಮಾತನಾಡಿ ಎಲ್ಲಾ ಮಹಿಳಾ ಸಂಘ, ಯುವಕಸಂಘ, ಗಣೇಶೋತ್ಸವ ಮಂಡಳ ಶಾರದೋತ್ಸವ ಮಂಡಳ ಎಲ್ಲರೂ ಎಚ್ಚರ ವಹಿಸುವ ಅವಶ್ಯಕತೆ ಇದೆ. ಹಿಂದೂ ಹಬ್ಬಗಳಿಗೆ ನೂರೆಂಟು ಷರತ್ತು ವಿಧಿಸುವ ಕಾಂಗ್ರೆಸ್ಸ ಸರ್ಕಾರ ಪೊಲೀಸರ ಮೇಲೆ ಹಲ್ಲೆ ಮಾಡುವ ಜಿಹಾದಿಗಳನ್ನು ಮಟ್ಟಹಾಕುವ ಬದಲು ಅವರನ್ನು ರಕ್ಷಿಸಲು ಮೊಕದ್ದಮೆ ಹಿಂದೆ ತೆಗೆದುಕೊಳ್ಳುವ ಈ ದುಷ್ಟ ನಿರ್ಧಾರ ಖಂಡಿಸುತ್ತೇವೆ ಎಂದರು.
ಅಗ್ರಾನಿ ದಮ್ಮಣಿಗಿ ಮಾತನಾಡಿ, ಈ ರೀತಿ ತುಷ್ಟೀಕರಣ ನೀತಿ, ವಕ್ಫ್ ಮಂಡಳಿಯಿಂದ ರೈತರ ಜಮೀನನ್ನು ತಮ್ಮದು ಎಂದುನೋಟೀಸ್ ಕಳಿಸುವ ನೀಚ ಕೃತ್ಯ ಸಮಾಜದ ಎಲ್ಲಾ ಬಂದುಗಳು ರೈತರೂ ಬೀದಿಗೆ ಬಂದು ಹೋರಾಟ ಮಾಡುವ ದಿನ ದೂರ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಮಹೇಶ ಪೋರವಾಲ, ರಮೇಶ ಲದ್ದಡ, ಮುನಿ ಸ್ವಾಮಿ ಭಂಡಾರಿ, ಗಂಗಾರಾಮ ನಾಯ್ಕ, ಶ್ರೀಕಾಂತ ಕಾಂಬಳೆ, ಶ್ರೀಕಾಂತ ಕದಮ್, ದಯಾನಂದ ನೇತಾಲಕರ, ವಿಜಯೇಂದ್ರಜೋಶಿ, ಗಿರೀಶಪೈ, ಮಹೇಶಇನಾಮದಾರ, ಆರ್.ಎಸ್.ಮುತಾಲಿಕ, ಸದಾಶಿವಹಿರೇಮಠ, ಪರಮೇಶ್ವರ ಹೆಗಡೆ, ಅಗ್ರಾನಿ ದಮ್ಮಣಗಿ ,ಜಯಾ ನಾಯ್ಕ, ಗೀತಾ ಹೆಗಡೆ, ಅಶೋಕ ಶಿಂತ್ರೆ, ವಿಜಯ ಜಾದವ, ಜೇಠಾಬಾಯಿ ಪಟೇಲ, ಕೃಷ್ಣ ಭಟ್ಟ ಮುಂತಾದ 40ಕ್ಕೂಹೆಚ್ಚು ಸಮಾಜದವರು ಪ್ರತಿಭಟನೆಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ