Latest

ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ವಿರುದ್ಧ ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ, ಮುಂಬಯಿ: ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಅವರ ಸರ್ಕಾರವನ್ನು ‘ಅಕ್ರಮ’ ಎಂದು ಕರೆದಿದ್ದಕ್ಕಾಗಿ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಕಾನೂನುಬಾಹಿರ ಎಂದು ಕರೆದ ಆರೋಪದ ಮೇಲೆ ಮತ್ತು ಅದರ ಆದೇಶಗಳನ್ನು ಪಾಲಿಸದಂತೆ ಕೇಳಿಕೊಂಡ ಆರೋಪದ ಮೇಲೆ ಸಂಜಯ್ ರಾವತ್ ವಿರುದ್ಧ ನಾಸಿಕ್‌ನ ಮುಂಬೈ ನಾಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾವತ್ ತಮ್ಮ ಹೇಳಿಕೆಯೊಂದಿಗೆ ಸಾರ್ವಜನಿಕ- ಪೊಲೀಸ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶ ಅಥವಾ ಯಾವುದೇ ವ್ಯಕ್ತಿಯನ್ನು ಅಪರಾಧ ಮಾಡಲು ಪ್ರೇರೇಪಿಸುವ ಮೂಲಕ ರಾಜ್ಯದ ಜನತೆಯ ನೆಮ್ಮದಿಗೆ ಭಂಗ ತಂದ ಆರೋಪದಡಿ IPC ಸೆಕ್ಷನ್ 505 (1) (b) ಅಡಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾವತ್, “ಸುಪ್ರೀಂಕೋರ್ಟ್ ಆದೇಶದ ನಂತರ ನಾನು ಈ ಸರ್ಕಾರ ಕಾನೂನುಬಾಹಿರವಾಗಿದೆ ಎಂದು ಹೇಳಿದ್ದೇನೆ” ಎಂದಿದ್ದಾರೆ.

ಸಂಜಯ್ ರಾವುತ್ ಅವರು ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆಯಲ್ಲಿ ಪ್ರಸ್ತುತ ಸರ್ಕಾರ ಕಾನೂನುಬಾಹಿರವಾಗಿದ್ದು ಅದರ ಆದೇಶಗಳನ್ನು ಅನುಸರಿಸಬಾರದು ಎಂದು ಹೇಳಿಕೆ ನೀಡಿದ್ದರು.

https://pragati.taskdun.com/mangaloregoods-trainaccident15-buffalos-death/
https://pragati.taskdun.com/m-p-kumaraswamyc-t-ravielection-result/
https://pragati.taskdun.com/karnatakaheavy-rainimd-5/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button