Kannada News

ಖಾಸಗಿ ಕಂಪನಿ ವಿರುದ್ಧ ಪ್ರಕರಣ ದಾಖಲು: ಸೂಕ್ತ ದಾಖಲೆ ಸಲ್ಲಿಸಲು ಹಣ ಹೂಡಿಕೆದಾರಿಗೆ ಸೂಚನೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶ್ರೀಶೈಲ ಎಸ್ ಎಸ್ ಗೋಲ್ಡನ್ ಲೈಪ್ ಪ್ರವೇಟ್ ಲಿ. ಕಂಪನಿಗೆ ಹಣ ಹೂಡಿಕೆ ಮಾಡಿ ಮೊಸಹೋಗಿರುವ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ರೀತ್ಯಾ ಕಂಪನಿಯ ಚೇರಮನ್ ಮತ್ತು ಡೈರೆಕ್ಟಗಳಾದ ಮಹಾವೀರ ನೆಮನ್ನ ಐತವಾಡೆ ಸುನಿತಾ ಭರತ್ ಕುಮಾರ್ ಐತವಾಡೆ, ವಿದ್ಯಾಸಾಗರ ಐತವಾಡೆ, ಅನಿಲ ವಿಲಾಸ ಕಾಕಡೆ, ಸಂತೋಷ್ ಬಾಳಸೋ ಶಗನೆ, ಶಿವಾನಂದ ನೀಲೇಶ ಕುಂಬಾರ, ತಾತ್ಯಾಸಾಬು ಕಲ್ಲಪ್ಪ ಖೋತ್, ರವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿಗೆ ಸಿಐಯು ದಾವಣಗೆರೆ ಘಟಕ್ಕೆ ವರ್ಗಾಯಿಸಿದ್ದು, ಎಸ್ ಎಸ್ ಗೋಲ್ಡನ್ ಲೈಪ್ ಪ್ರವೇಟ್ ಲಿ. ಕಂಪನಿಗೆ ಹಣ ಹೂಡಿಕೆ ಮಾಡಿ ಮೊಸಹೋಗಿರುವ ಹೂಡಿಕೆದಾರರು ಮಾರ್ಚ. ೨೦, ೨೦೨೩ ರ ರೋಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಪೊಲೀಸ್ ನಿರೀಕ್ಷಕರು (ತನಿಖಾಧಿಕಾರಿ) ಸಿಐಡಿ ಸಿಐಯು ಘಟಕ, ದಾವಣಗೆರೆ ಅವರನ್ನು ಭೇಟಿ ಮಾಡಿ ಎಂದು ಸೈಯದ್ ದಾದಾ ನೂರ್ ಅಹಮ್ಮದ್ ಪೊಲೀಸ್ ನಿರೀಕ್ಷಕರು (ತನಿಖಾಧಿಕಾರಿ) ಸಿಐಡಿ ಸಿಐಯು ಘಟಕ, ದಾವಣಗೆರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Home add -Advt

Related Articles

Back to top button