Latest

ಹೋಂ ವರ್ಕ್ ಮಾಡಿಲ್ಲ ಎಂದು 8 ವರ್ಷದ ಮಗಳ ಕೈ ಕಾಲು ಕಟ್ಟಿ ಟೆರೇಸ್ ಮೇಲೆ ಮಲಗಿಸಿದ ಅಮ್ಮ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಹೋಂ ವರ್ಕ್ ಮಾಡಿಲ್ಲ, ಹೇಳಿದರೂ ಮಗಳು ಮಾತು ಕೇಳಲ್ಲ ಎಂದು ಅಮ್ಮ ತನ್ನ 8 ವರ್ಷದ ಬಾಲಕಿಯ ಕೈ ಕಾಲು ಕಟ್ಟಿಹಾಕಿ ಉರಿ ಬಿಸಿಲಿನಲ್ಲಿ ಟೆರೇಸ್ ಮೇಲೆ ಕೂರಿಸಿದ ಘಟನೆ ಬೆಳಕಿಗೆ ಬಂದಿದೆ.

ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಾಲಕಿ ಪರದಾಡುತ್ತಿದ್ದಾಳೆ. ಬಿಸಿಲ ಧಗೆಯಿಂದ ಮೈ ಚರ್ಮ ಸುಡುತ್ತಿದೆ ಎಂದು ಮಗು ಕಿರುಚುತ್ತಿದ್ದಾಳೆ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲಿಸರು ತನಿಖೆ ನಡೆಸಿ ಮನೆ ಪತ್ತೆಹಚ್ಚಿದ್ದು, ತುಕ್ಮಿಪುರ್ ಖಜೂರಿ ಖಾಸ್ ಪ್ರದೇಶದಲ್ಲಿ ಮಹಿಳೆಯೊಬ್ಬರು ಮಗಳು ಹೋಂ ವರ್ಕ್ ಮಾಡಿಲ್ಲ ಎಂದು ಈ ರೀತಿ ಶಿಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

Home add -Advt

ಮಗಳು ಹೇಳಿದ ಮಾತು ಕೇಳದೇ ಹೋಂ ವರ್ಕ್ ಮಾಡದೇ ಹಠ ಮಾಡುತ್ತಿದ್ದಳು. ಅದಕ್ಕೆ ಮಗಳಿಗೆ ಬೆದರಿಸಲು ಶಿಕ್ಷೆ ಕೊಟ್ಟಿದ್ದೇನೆ. ಐದಾರು ನಿಮಿಷ ಅಷ್ಟೇ ಆಕೆಯನ್ನು ಟೆರೆಸ್ ಮೇಲೆ ನಿಲ್ಲಿಸಿದ್ದೆ. ನಂತರ ಆಕೆಯನ್ನು ಕೆಳಗೆ ಕರೆದುಕೊಂಡು ಬಂದಿರುವುದಾಗಿ ಮಹಿಳೆ ಹೇಳಿದ್ದಾಳೆ. ಮಗುವನ್ನು ಕಠೋರವಾಗಿ ಶಿಕ್ಷಿಸಿದ ಮಹಿಳೆ ಹಾಗೂ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಜಯೇಂದ್ರ ಜತೆಗೆ ನನ್ನನ್ನು ಹೋಲಿಸಬೇಡಿ ಎಂದ ಸಚಿವ ಸೋಮಣ್ಣ

Related Articles

Back to top button