Latest

ಹೆಚ್ಚುತ್ತಿದೆ ಡೆಂಘಿ ಅಟ್ಟಹಾಸ; 73 ಪ್ರಕರಣ ಪತ್ತೆ; ಐವರು ಬಲಿ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ರಾಯಚೂರಿನಲ್ಲಿ ಡೆಂಘಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 5 ಜನರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 73 ಜನರಲ್ಲಿ ಸೋಂಕು ಪತ್ತೆಯಾಗಿದೆ.

ರಾಯಚೂರು ಡಿ ಹೆಚ್ ಒ ನಾಗರಾಜ್ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ 1514 ಜನರು ಜ್ವರದಿಂದ ಬಳಲುತ್ತಿದ್ದಾರೆ. 73 ಜನರಲ್ಲಿ ಡೆಂಘ್ಯೂ ಪತ್ತೆಯಾಗಿದ್ದು, 5 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮಾನ್ವಿ ಪಟ್ಟಣದಲ್ಲಿ 17ಜನರಲ್ಲಿ ಡೆಂಘ್ಯೂ ದೃಢಪಟ್ಟಿದೆ. ಮಾನ್ವಿ ಒಂದರಲ್ಲೇ ಒಂದು ತಿಂಗಳಲ್ಲಿ ನಾಲ್ವರು ಶಂಕಿತ ಡೆಂಘ್ಯೂ ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 23 ತಂಡ ರಚಿಸಿ ಡೆಂಘ್ಯೂ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

Home add -Advt

Related Articles

Back to top button