Kannada NewsLatest

*ಸಾಲ ತೀರಿಸಲು ಮೂರು ತಿಂಗಳ ಮಗುವನ್ನೇ ಮಾರಿದ ತಂದೆ*

ಪ್ರಗತಿವಾಹಿನಿ ಸುದ್ದಿ: ಹಣದ ಆಸೆಗಾಗಿ ಸಾಲ ತೀರಿಸುವ ನೆಪದಲ್ಲಿ ಇಲ್ಲೊಬ್ಬ ತಂದೆ ಮಗುವನ್ನೇ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Home add -Advt

ಕೋಲಾರ ಜಿಲೆಯ ಬಂಗಾರಪೇಟೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಗಾರಪೇಟೆ ನಗರದ ನಿವಾಸಿ ಮುನಿರಾಜು ಹಾಗೂ ಪವಿತ್ರಾ ದಂಪತಿಗೆ ಗಂಡುಮಗುವಾಗಿತ್ತು. ಸಾಲ ತೀರಿಸಬೇಕು ಎಂದು ಹಣದ ಆಸೆಗಾಗಿ ಮುನಿರಾಜು ಕೆರೆಕೊಡಿ ನಿವಾಸಿ ವಲ್ಲಿ ಎಂಬ ಮಹಿಳೆಗೆ ಮೂರು ತಿಂಗಳ ಗಂಡುಮಗುವನ್ನು ಮಾರಾಟ ಮಾಡಿದ್ದಾನೆ.

ಪತಿಯ ವರ್ತನೆಗೆ ನೊಂದ ಪತ್ನಿ ಪವಿತ್ರಾ ತನ್ನ ಮಗುವನ್ನು ವಾಪಾಸ್ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಬಂಗಾರಪೇಟೆ ಪೊಲೀಸರು ಆರೋಪಿ ಮುನಿರಾಜುನನ್ನು ಬಂಧಿಸಿದ್ದಾರೆ.


Related Articles

Back to top button