Latest

ಕೇಂದ್ರ ಸಚಿವ ಶ್ರೀಪಾದ ನಾಯ್ಕ ಭೇಟಿಯಾದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಗೆ ಭೇಟಿ ನೀಡಿದ ಪ್ರವಾಸೋದ್ಯಮ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯ್ಕರವರನ್ನು ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ರವರು ಭೇಟಿ ಮಾಡಿ ಕಣಬರ್ಗಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಂದಿರದ ಪುನರೊದ್ಧಾರ ಹಾಗೂ ಮಂದಿರದ ಪರಿಸರವನ್ನು ಪ್ರವಾಸಿ ಸ್ಥಾನವಾಗಿ ಮಾರ್ಪಡಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಚೋಳ ಸಾಮ್ರಾಜ್ಯದ ವಾಸ್ತು ಶೀಲ್ಪದ ಉದಹಾರಣೆಯಾಗಿರುವ ಈ ಭವ್ಯ ಹಾಗೂ ಶ್ರದ್ಧೆ ಪ್ರತೀಕವಾಗಿರುವ ಈ ಐತಿಹಾಸಿಕ ದೇವಸ್ಥಾನದ ಪುನರೊದ್ಧಾರದಿಂದ ಉತ್ತರಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಹೇಚ್ಚಾನೇಚ್ಚು ಭಕ್ತರು ಆಗಮಿಸುತ್ತಾರೆ. ಪ್ರವಾಸಿ ಸ್ಥಾನವನ್ನಾಗಿ ಮಾರ್ಪಡಿಸುವುದರಿಂದ ಬೆಳಗಾವಿಯ ಅನೇಕ ಪ್ರವಾಸಿ ಸ್ಥಾನಗಳಲ್ಲಿ ಈ ಪ್ರಾಚೀನ ದೇವಸ್ಥಾನವನ್ನು ಸಹ ಸೇರ್ಪಡಿಸಬಹುದು ಎಂದು ಶಾಸಕ ಅನಿಲ ಬೆನಕೆ ಕೇಂದ್ರ ಸಚಿವರಿಗೆ ವಿಸ್ತರಿಸಿ ಅನುದಾನ ಮಂಜೂರಾತಿ ಮಾಡಬೇಕಾಗಿ ವಿನಂತಿಸಿದರು.

ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ಮುಂಬರುವ ದಿನಗಳಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸಲು ಸಹಕರಿಸುವುದಾಗಿ ತಿಳಿಸಿದರು.
ನವೆಂಬರ್ ನಲ್ಲಿ ರಮೇಶ್ ಜಾರಕಿಹೊಳಿ ಸಂಪುಟಕ್ಕೆ? : ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ

Home add -Advt

Related Articles

Back to top button