National

*ಮೋರಿಗೆ ಬಿದ್ದ ಕಾರು: ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ನಿರ್ಮಾಣ ಹಂತದಲ್ಲಿದ್ದ ಮೋರಿಗೆ ಕಾರು ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ಅಸ್ಸಾಂ ನಲ್ಲಿ ನಡೆದಿದೆ.

Home add -Advt

ಬಿಹಾರದಿಂದ ಮದುವೆಗೆಂದು ಅಸ್ಸಾಂನ ತಿನ್ಸುಕಿಯಾಗೆ ಒಂದೇ ಕುಟುಂಬದ ಆರು ಜನರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ದಿಹಿಂಗಿಯಾ ಗಾಂವ್ ನ ಬೈಪಾಸ್ ನಲ್ಲಿ ಅಪಘತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಮೋರಿಗೆ ಕಾರು ಬಿದ್ದಿದೆ.

ಸ್ಥಳದಲ್ಲೇ ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮೋಹನ್ ಶಾ, ರಾಜೇಶ್ ಗುಪ್ತಾ, ಮೊಂಟು ಶಾ, ಮಗು ಅಥರ್ವ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Related Articles

Back to top button