Latest

ಹಾಡ ಹಗಲೇ ಯುವತಿಯ ಕಿಡ್ನ್ಯಾಪ್

ಪ್ರಗತಿವಾಹಿನಿ ಸುದ್ದಿ; ಕೋಲಾರ: ಹಾಡ ಹಗಲೇ ಯುವತಿಯೊಬ್ಬಳನ್ನು ಯುವಕ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮಾಡಿರುವ ಘಟನೆ ಕೋಲಾರ ಜಿಲ್ಲೆ ದೇವಾಂಗ ಪೇಟೆಯಲ್ಲಿ ನಡೆದಿದೆ.

ಯುವತಿಯನ್ನು ಕಿಡ್ನ್ಯಾಪ್ ಮಾಡಿದ ಯುವಕನನ್ನು ಶಿವ ಎಂದು ಗುರುತಿಸಲಾಗಿದೆ. ತಾನು ಪ್ರೀತಿಸಿದ ಯುವತಿಯನ್ನು ಆಕೆಗೂ ಗೊತ್ತಿಲ್ಲದಂತೆ ಏಕಾಏಕಿ ಕಿಡ್ನ್ಯಾಪ್ ಮಾಡಿದ್ದಾನೆ.

Home add -Advt

ದೇವಾಂಗ ಪೇಟೆಯವರೇ ಆದ ಯುವಕ ಶಿವ ಹಾಗೂ ಯುವತಿ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ವಿವಾಹಕ್ಕೆ ಮನೆಯಲ್ಲಿ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಯುವತಿಯನ್ನು ಯುವಕ ಕಿಡ್ನ್ಯಾಪ್ ಮಾಡಿದ್ದಾನೆ ಎನ್ನಲಾಗಿದೆ.

ಯುವತಿ ತನ್ನ ಗೆಳತಿಯ ಜತೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಇನೋವಾ ಕಾರಿನಲ್ಲಿ ಬಂದ ಯುವಕ ಏಕಾಏಕಿ ಕಾರು ನಿಲ್ಲಿಸಿ ಯುವತಿಯನ್ನು ಹೊತ್ತೊಯ್ದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಲ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button