Latest

ತಿರಸ್ಕೃತವಾಗಲಿದೆಯೇ ನಿಖಿಲ್ ಕುಮಾರಸ್ವಾಮಿ ನಾಮಪತ್ರ?

ಪ್ರಗತಿವಾಹಿನಿ ಸುದ್ದಿ, ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿಖಿಲ್ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ತಿರಸ್ಕೃತವಾಗುವ ಆತಂಕ ಎದುರಾಗಿದೆ.

ನಿಖಿಲ್ ಹಳೆಯ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ನಂತರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅವರನ್ನು ಮತ್ತೆ ಕರೆಸಿ ಹೊಸ ಮಾದರಿಯಲ್ಲಿ ನಾಮಪತ್ರ ಪಡೆದಿದ್ದರು. ಆ ವೇಳೆಗೆ ಸಮಯ ಮೀರಿತ್ತು. 

Home add -Advt

ಹಾಗಾಗಿ ಆನಾಮಪತ್ರ ತಿರಸ್ಕರಿಸಬೇಕು ಎಂದು ಸುಮಲತಾ ಅಂಬರೀಷ್ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲು ವೀಕ್ಷಕರು ಆಗಮಿಸಿದ್ದಾರೆ.

ದುರುದಾರರು ಹಾಗೂ ಡಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿದ್ದಾರೆ. ನಾಮಪತ್ರ ತಿರಸ್ಕೃತವಾಗಲಿದೆಯೋ ಅಥವಾ ಸ್ವೀಕರಿಸಲಾಗುವುದೋ ಕಾದು ನೋಡಬೇಕಿದೆ. ತಿರಸ್ಕೃತವಾದಲ್ಲಿ ಜಿಲ್ಲಾಧಿಕಾರಿ ಖುರ್ಚಿಗೂ ಆತಂಕ ಎದುರಾಗಲಿದೆ. 

Related Articles

Back to top button