ಪ್ರಗತಿವಾಹಿನಿ ಸುದ್ದಿ, ಧಾರವಾಡ/ ನವದೆಹಲಿ – 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬೆಳಗಾವಿಯ ಜಿಎಸ್ಟಿ ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದಿದ್ದಾರೆ.
ಫ್ಯಾಕ್ಟರಿ ಒಂದರ ಮಾಲಿಕರು ಜಿಎಸ್ಟಿ ಫೈಲ್ ಮಾಡಿರದ ಹಿನ್ನೆಲೆಯಲ್ಲಿ ಅವರನ್ನು ಬಚಾವ್ ಮಾಡಲು ಜಿಎಸ್ಟಿ ಇನಸ್ಪೆಕ್ಟರ್ ಒಬ್ಬರು 20 ಲಕ್ಷ ರೂ. ಕೇಳಿದ್ದರು. ಅದರ ಮೊದಲ ಕಂತಾಗಿ 5 ಲಕ್ಷ ರೂ. ಪಡೆಯುತ್ತಿದ್ದಾಗ ಸಿಬಿಐ ದಾಳಿ ನಡೆಸಿದೆ.
ಇನಸ್ಪೆಕ್ಟರ್ ಜೊತೆಗೆ ಇದರಲ್ಲಿ ಪಾಲುದಾರರೆನ್ನಲಾದ ಇಬ್ಬರು ಸುಪರಿಂಟೆಂಡೆಂಟ್ ಗಳನ್ನು ಕೂಡ ಬಂಧಿಸಲಾಗಿದೆ. ಬಂಧಿತರನ್ನು ಧಾರವಾಡದ ಹೈಕೋರ್ಟ್ ಗೆ ಹಾಜರುಪಡಿಸಲಾಗಿದೆ.
ವೈಭವ ಗೋಯಲ್, ಮೋಹನ್ ಕುಮಾರ ಮತ್ತು ಸುರೇಶ ಜಡಗಿ ಬಂಧಿತರು.
ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳ ಮನೆಗಳನ್ನೂ ತಪಾಸಣೆ ನಡೆಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ