Karnataka News

*ಸೈಟ್ ತೋರಿಸುವುದಾಗಿ ಕರೆದೊಯ್ದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ*

ಬಿಲ್ಡರ್ ನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಪ್ರಗತಿವಾಹಿನಿ ಸುದ್ದಿ: ಮಂಗಳೂರು ಮೂಲದ ಬಿಲ್ಡರ್ ಓರ್ವರ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.

Home add -Advt

ರಶೀದ್ ಎಂಬ ಬಿಲ್ಡರ್ ವಿರುದ್ಧ ಮಹಿಳೆ ಗಂಭೀರ‍ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಕುಶಾಲನಗರದಲ್ಲಿರುವ ಸೈಟ್ ಖರೀದಿ ಮಾಡಬಹುದು ಸೈಟ್ ತೋರಿಸುತ್ತೇನೆ ಎಂದು ಅ.21ರಂದು ರಶೀದ್ ಕಾರಿನಲ್ಲಿ ಮಹಿಳೆ ಕರೆದೊಯ್ದಿದ್ದ. ಮಹಿಳೆ ಹೋಟೆಲ್ ನಲ್ಲಿ ಇಬ್ಬರಿಗೂ ಪ್ರತ್ಯೇಕ ರೂಂ ಬುಕ್ ಮಾಡಿದ್ದರು. ಆದರೆ ಬಿಲ್ಡರ್ ರಶೀದ್ ಇಬ್ಬರೂ ಒಂದೇ ರೂಂ ನಲ್ಲಿರುವ ಇಂಗಿತ ವ್ಯಕ್ತಪಡಿಸಿದ್ದ. ಇದರಿಂದ ಹೆದರಿದ ಮಹಿಳೆ ವಿರಾಜಪೇಟೆಯಲ್ಲಿರುವ ತನ್ನ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದರು.

ಮರುದಿನ ಸೈಟ್ ನೋಡಲು ಬರುವಂತೆ ರಶೀದ್ ಮಹಿಳೆಯನ್ನು ಕರೆದಿದ್ದು, ಮಹಿಳೆ ಹೋಗಿದ್ದಾಗ ದಾರಿ ಮಧ್ಯೆ ಹಣದ ಆಸೆ ತೋರಿಸಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡಿಸಿದ್ದಾನಂತೆ. ನೊಂದ ಮಹಿಳೆ ಮ್ಯಾನೇಜರ್ ಗೆ ವಿಷಯ ತಿಳಿಸಿದಾಗ ಬಿಲ್ಡರ್ ಮಹಿಳೆ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ದಿದ್ದಾನಂತೆ.

ಇದರಿಂದ ಬೇಸತ್ತ ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಿಲ್ಡರ್ ರಶೀದ್ ವಿರುದ್ಧ ಪ್ರಕರಣ ದಾಖಲಾಗಿದೆ.


Related Articles

Back to top button