Kannada NewsKarnataka NewsLatest
ವರ್ಷದ ಉದ್ಯಮ ಪ್ರಶಸ್ತಿಗೆ ಬೆಳಗಾವಿಯ ಸಿಕೇರ್ – CCARE of Belagavi awarded as the ENTERPRISE of The YEAR
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ರಾಜ್ಯ ಕ್ರೆಡೈ ಚೇರಮನ್ ಆಗಿರುವ ಬೆಳಗಾವಿಯ ಲೀಡಿಂಗ್ ರಿಯಲ್ ಎಸ್ಟೇಟ್ ಉದ್ಯಮಿ ಚೈತನ್ಯ ಕುಲಕರ್ಣಿ ಒಡೆತನದ CCARE (CGK ಕನ್ಸ್ಟ್ರಕ್ಷನ್ಸ್ ಮತ್ತು ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್) ವರ್ಷದ ಉದ್ಯಮ ಎಂದು ಟೈಕಾನ್ ಹುಬ್ಬಳ್ಳಿಯಿಂದ ಪ್ರಶಸ್ತಿ ಪಡೆದಿದೆ.
ಶನಿವಾರ ಹುಬ್ಬಳ್ಳಿಯ ಹೊಟೇಲ್ ನವೀನ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಜಿ ಮತ್ತು ಗೌರಂಗ್ ಪ್ರಭು ದಾಸ್ ಹುಬ್ಬಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
(CCARE – CGK constructions and real estate PVT ltd, is awarded as the ENTERPRISE of The YEAR by At Tiecon by Tiecon Hubli at the Hands of Hon . Basavaraj Bommai ji , Kapil Dev ji and Gaurang Prabhu das ji at Hotel Naveen at Hubli on 26/03/22)
*ಸ್ಟಾರ್ಟ್ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮುಂಚೂಣಿ*
ಸ್ಟಾರ್ಟ್ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ಕೈಗಾರಿಕೆ ಹಾಗೂ ಉದ್ದಿಮೆ ಸ್ಥಾಪನೆ ಮಾಡಲು ಹೆಚ್ಚಿನ ಸವಲತ್ತು ಹಾಗೂ ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಿದ್ದು. ಒಂದು ಲಕ್ಷ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿವೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ನವೀನ್ ಹೋಟೆಲ್ನಲ್ಲಿ ಟೈ ಯುವ ಉದ್ದಿಮೆದಾರರ ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಆನ್ ಇವನಿಂಗ್ ವಿಥ್ ಲೆಜೆಂಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಯಾಂಡ್ ಬೆಂಗಳೂರು ಆಲೋಚನೆಗೆ ಒತ್ತು ನೀಡಿದ್ದು, ಬೆಂಗಳೂರು ಹೊರತಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಿ, ರಿಯಾಯಿತಿಗಳನ್ನು ಸಹ ನೀಡಲಾಗಿದೆ. ಚೆನ್ನೈ ಬೆಂಗಳೂರು ಹಾಗೂ ಚಿತ್ರದುರ್ಗ ಹಾಗೂ ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕೈಗಾರಿಕಾ ಟೌನ್ಶಿಪ್ ನಿರ್ಮಿಸಲಾಗುವುದು ಎಂದರು.
ಟೈ ಉತ್ತಮ ಕೆಲಸ ಮಾಡುತ್ತಿದೆ. ಯುವ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ. ಯುವಜನರು ಭವಿಷ್ಯದ ಬಗ್ಗೆ ಆಶಾದಾಯಕಾಗಿರಬೇಕು. ಆತ್ಮ ಸ್ಥೈರ್ಯ ಹೊಂದಬೇಕು. ಉದ್ದಿಮೆ ಸ್ಥಾಪಿಸಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕು. ವೈಯಕ್ತಿಕವಾಗಿ ಭಗವದ್ಗೀತೆಯನ್ನು ನಾನು ಓದುತ್ತೇನೆ. ನಮ್ಮ ಜೀವನದ ಎಲ್ಲಾ ಪ್ರಶ್ನೆಗಳಿಗೆ ಭಗವದ್ಗೀತೆ ಉತ್ತರ ನೀಡುತ್ತದೆ. ಅನುಭವ ಎಲ್ಲದಕ್ಕಿಂತ ದೊಡ್ಡದು. ನಮ್ಮ ಪ್ರಜ್ಞೆಗೆ ವಿರುದ್ಧ ಕೆಲಸ ಮಾಡಬಾರದು.
ಪ್ರತಿ ಕೆಲಸ ಮಾಡುವಾಗ ಅಂತಃಸಾಕ್ಷಿ ಮಾತನ್ನು ಕೇಳಿ. ವಿಮರ್ಶೆ ಹಾಗೂ ವಿರೋಧಗಳಿಗೆ ಹೆದರದಿರಿ ಎಂದು ಯುವ ಉದ್ದಿಮೆದಾರರಿಗೆ ಕಿವಿಮಾತು ಹೇಳಿದರು.
ರಾಜಕೀಯಕ್ಕೆ ದೇಶ ಹಾಗೂ ಜನರ ಜೀವನದಲ್ಲಿ ಬದಲಾವಣೆ ತರುವ ಶಕ್ತಿಯಿದೆ. ಇಚ್ಛಾಶಕ್ತಿ ಉಳ್ಳ ನಾಯಕರು ಉತ್ತಮ ಬದಲಾವಣೆ ತರಬಲ್ಲರು. ಪ್ರತಿಯೊಬ್ಬರು ನಾಯತ್ವದ ಗುಣ ಬೆಳೆಸಿಕೊಳ್ಳಬೇಕು. ರಾಜಕೀಯ ರಂಗದಲ್ಲಿ ಮುಕ್ತ ಅವಕಾಶಗಳಿವೆ. ಯಾವುದೇ ನಿರ್ಬಂಧಗಳಿಲ್ಲ. ಕಪಿಲ್ದೇವ್ ವಿಶ್ವಕಪ್ ಗೆಲ್ಲುವುದರ ಮೂಲಕ ದೇಶದ ಜನರ ಮನಗಳನ್ನು ಗೆದ್ದರು. ಹುಬ್ಬಳ್ಳಿಯ ಉದ್ದಿಮೆದಾರರು ಸಣ್ಣನಗರದ ಮನಸ್ಥಿತಿಯನ್ನು ತೊರೆದು, ಮುಕ್ತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕು. ಹೊಸ ರೀತಿ ಉದ್ದಿಮೆ ಹಾಗೂ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇಂದು ವಿಶ್ವವೇ ಒಂದು ಹಳ್ಳಿಯಾಗಿದೆ. ವ್ಯಾಪಾರಸ್ಥರು ವಾರದ ಮಧ್ಯದಿನವಾದ ಬುಧವಾರದಂದು ತಮ್ಮ ವ್ಯಾಪಾರ ವಹಿವಾಟುಗಳಿಗೆ ರಜೆ ಘೋಷಿಸುತ್ತಾರೆ. ಇದರಿಂದ ಹಲವು ಕೈಗಾರಿಕೆಗಳಲ್ಲಿ ನಷ್ಟ ಉಂಟಾಗುತ್ತದೆ. ಇಂಥ ಸಂಪ್ರದಾಯ ತಪ್ಪಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ದೇವ್,ಹುಬ್ಬಳ್ಳಿ ಕೆ.ಎಲ್.ಇ. ಸಂಸ್ಥೆಯ ಶಂಕರಣ್ಣ ಮುನವಳ್ಳಿ, ಹುಬ್ಬಳ್ಳಿ ಟೈ ಪ್ರೆಸಿಡೆಂಟ್ ವಿಜೇಶ್ ಸೈಗಲ್, ಇಸ್ಕಾನ್ ಸಂಸ್ಥೆಯ ಗೋವರ್ಧನ್ ಪ್ರಭುದಾಸ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ