Latest

ಮಾರಕಾಸ್ತ್ರಗಳ ಸಮೇತ ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಸಿ ಪೊಲೀಸರು ಮೂರನೇ ಸುತ್ತಿನ ಕಾರ್ಯಾಚರಣೆ ನಡೆಸಿದ್ದು, ತಡರಾತ್ರಿ ಹೆಗ್ಗಡೆ ನಗರದ ಸೋಷಿಯಲ್​​ ಡೆಮಾಕ್ರಟಿಕ್​​​​ ಪಾರ್ಟಿ ಆಫ್​​ ಇಂಡಿಯಾ(ಎಸ್​​ಡಿಪಿಐ) ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮಾರಾಕಾಸ್ತ್ರಗಳ ಸಮೇತ 8 ಮಂದಿ ಆರೋಪಿಗಳು ಸಿಕ್ಕಿ ಬಿದ್ದಿದ್ಧಾರೆ.

ಕಬ್ಬಿಣದ ರಾಡ್, ಬ್ಯಾಟ್​ಗಳು, ಇತರೆ ಆಯುಧಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಹೆಗ್ಗಡೆ ನಗರದ ಎಸ್​​ಡಿಪಿಯ ಕಚೇರಿಯಲ್ಲಿ 8 ಮಂದಿ ಸೇರಿದಂತೆ ಕಳೆದ ರಾತ್ರಿ 57 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

40ಕ್ಕೂ ಅಧಿಕ ಮಂದಿ ಆರೋಪಿ ನವೀನ್​ ಶೇರ್​ ಮಾಡಿದ್ದ ಎನ್ನಲಾದ ಫೋಸ್ಟ್​ ಅನ್ನು ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿದ್ದಾರೆ ಎನ್ನಲಾಗಿದೆ. 40 ಮಂದಿ ಪೈಕಿ ಶೇ.40ರಷ್ಟು ಆರೋಪಿಗಳು ಎಸ್​ಡಿಪಿಐ ಸದಸ್ಯರು ಎಂದು ಹೇಳಲಾಗುತ್ತಿದೆ.

ಮೊದಲ ಹಂತದಲ್ಲಿ 213 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ನಂತರ ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ 84 ಆರೋಪಿಗಳನ್ನು ಬಂಧಿಸಿದ್ದರು. ಘಟನೆಯಲ್ಲಿ ಭಾಗಿಯಾದ ನೂರಕ್ಕೂ ಹೆಚ್ಚು ಜನರು ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button