Latest

ಸಿಡಿ ಪ್ರಕರಣ: ಹೊಸ ಬಾಂಬ್ ಸಿಡಿಸಿದ ಯುವತಿ ಸಹೋದರ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ಸಹೋದರ ಮತ್ತೊಂದು ಬಾಂಬ್ ಸಿಡಿಸಿದ್ದು, ನಮ್ಮ ಬಳಿ 11 ಆಡಿಯೋ ಸಾಕ್ಷ್ಯಗಳಿವೆ. ಅದರಲ್ಲಿ ಎರಡನ್ನು ಮಾತ್ರ ಈಗಗಾಲೇ ಎಸ್ ಐಟಿ ಅಧಿಕಾರಿಗಳಿಗೆ ನೀಡಿದ್ದೇವೆ ಎಂದರು.

ಇನ್ನುಳಿದ 9 ಆಡಿಯೋ ಸಾಕ್ಷ್ಯಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಬಗ್ಗೆ ಪ್ರಸ್ತಾಪಿಸಿರುವುದೂ ಇದೆ. ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂದು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ಸಹೋದರ, ಪ್ರಕರಣದಲ್ಲಿ ಡಿಕೆಶಿ ಕೈವಾಡ ಇಲ್ಲ ಎಂದು ಹೇಳುವುದಾದರೆ, ರಾಜ್ಯದಲ್ಲಿ ಹಲವು ರಾಜಕೀಯ ನಾಯಕರಿದ್ದಾರೆ. ಅವೆರೆಲ್ಲರನ್ನೂ ಬಿಟ್ಟು ನನ್ನ ಸಹೋದರಿ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಯಾಕೆ ಹೇಳುತ್ತಾಳೆ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಯುವತಿ ತಂದೆ ತಮ್ಮ ಮಗಳು ಒತ್ತಡದಲ್ಲಿದ್ದಾಳೆ. ಆಕೆ ನೀಡಿರುವ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಕೋರ್ಟ್ ಮೊರೆ ಹೋಗಿರುವ ಘಟನೆ ನಡೆದಿದೆ.

ಯುವತಿಯ ಪಿಜಿ ಮಹಜರು, ಸಂಜೆ ರಮೇಶ ಜಾರಕಿಹೊಳಿ ಫ್ಲ್ಯಾಟ್ ಮಹಜರು ಸಾಧ್ಯತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button