ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಎಸ್ಐಟಿ ಇಂದು ಯುವತಿ ವಾಸವಿದ್ದ ಆರ್.ಟಿ.ನಗರದ ಪಿಜಿಯಲ್ಲಿ ಮಹಜರು ನಡೆಸಿದೆ.
ಬೆಳಗ್ಗೆಯಿಂದಲೇ ಮಹಜರು ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದು, ಇದಾದ ನಂತರ ಸಂಜೆ ರಮೇಶ ಜಾರಕಿಹೊಳಿ ಅವರಿಗೆ ಸೇರಿರುವ ಮಂತ್ರಿಗ್ರೀನ್ ಆಪಾರ್ಟ್ ಮೆಂಟ್ ಫ್ಲ್ಯಾಟ್ ನಲ್ಲಿ ಮಹಜರು ನಡೆಯುವ ಸಾಧ್ಯತೆ ಇದೆ. ಇದೇ ಫ್ಲ್ಯಾಟ್ ನಲ್ಲಿ ತನ್ನ ಮೇಲೆ ರಮೇಶ ಜಾರಕಿಹೊಳಿ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಇಂದು ಸಂಜೆಗೆ ಮಹಜರು ಪ್ರಕ್ರಿಯೆ ಪೂರ್ಣಗೊಳ್ಳುವ ಸಧ್ಯತೆ ಇದ್ದು, ನಂತರ ರಮೇಶ ಜಾರಕಿಹೊಳಿ ಅವರನ್ನು ಕರೆಸಿ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಯುವತಿ ನಿನ್ನೆ ಸೆಕ್ಷನ್ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ ನಂತರ ತಾನು ರಮೇಶ ಜಾರಕಿಹೊಳಿ ಅವರಿಂದ ಪಡೆದಿದ್ದು ಎಂದು ಹೇಳಿ ಕೆಲವು ಗಿಫ್ಟ್ ಗಳ ದಾಖಲೆಗಳನ್ನು ಎಸ್ಐಟಿಗೆ ಹಸ್ತಾಂತರಿಸಿದ್ದಾಳೆ. ಜೊತೆಗೆ ರಮೇಶ ಜಾರಕಿಹೊಳಿ ಜೊತೆ ನಡೆಸಿರುವ 300 ಪುಟಗಳಷ್ಟು ವಾಟ್ಸಪ್ ಚಾಟ್ ನ್ನು ಕೂಡ ಯುವತಿ ಸಲ್ಲಿಸಿದ್ದಾಳೆ.
ಇನ್ನೊಂದೆಡೆ ಯುವತಿ ಪಾಲಕರು ನಿನ್ನೆ ತಮ್ಮ ಮಗಳು ಸೆಕ್ಷನ್ 164ರ ಅಡಿ ದಾಖಲಿಸಿರುವ ಹೇಳಿಕೆಯನ್ನು ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮಗಳು ಸ್ವ ಇಚ್ಛೆಯಿಂದ ಹೇಳಿಕೆ ನೀಡಿಲ್ಲ. ಯಾರದ್ದೋ ಒತ್ತಡದಿಂದ ಹೇಳಿದ್ದಾಳೆ. ಹಾಗಾಗಿ ಅದನ್ನು ಪರಿಗಣಿಸಬಾರದು ಎನ್ನುವ ಮನವಿಯನ್ನು ಮಾಡಿದ್ದಾರೆ.
ಯುವತಿಯ ಪೋಷಕರು ಬೆಳಗಾವಿ ಬಾಡಿಗೆ ಮನೆಯಿಂದ ರಾತ್ರಿ ವಿಜಯಪುರಕ್ಕೆ ತೆರಳಿದ್ದಾರೆ.
ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಈಶ್ವರಪ್ಪ: ಹೈಕಮಾಂಡ್ ಗೆ ದೂರು
ಅನಂತಕುಮಾರ ಹೆಗಡೆ ಮನೆಗೆ ಕಾಗೇರಿ ಹೋಗಿದ್ದೇಕೆ?
ಸಿಡಿ ಯುವತಿಯ ಮೆಡಿಕಲ್ ಟೆಸ್ಟ್ ಪೂರ್ಣ ; ಸ್ಥಳ ಪಂಚನಾಮೆ ಸಾಧ್ಯತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ