
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದು 5 ಕೋಟಿ ವ್ಯವಹಾರ ಎಂದು ನಾನು ಮೊದಲ ದಿನವೇ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನರೇಶ್ ಎಂಬ ಹುಡುಗನ ಬಗ್ಗೆಯೂ ನಾನು ಪ್ರತಿಕ್ರಿಯಿಸಿದ್ದೆ. ಈಗ ಒಂದೊಂದಾಗಿ ಹೊರಬರುತ್ತಿದೆ. ಆದರೆ ಈ ಪ್ರಕರಣದ ಮಹಾ ನಾಯಕ ಯಾರು ಎಂಬುದು ಮಾತ್ರ ನನಗೆ ಗೊತ್ತಿಲ್ಲ ಎಂದರು.
ನನಗೂ ಹಲವು ಮೂಲಗಳಿಂದ ಎಲ್ಲ ರೀತಿಯ ಮಾಹಿತಿ ಸಿಗುತ್ತೆ. ನನ್ನ ತಂದೆ 70 ವರ್ಷ ರಾಜಕೀಯ ಮಾಡಿದವರು ಎಂಬುದು ನೆನಪಿರಲಿ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.