Latest

ರಮೇಶ್ ಜಾರಕಿಹೊಳಿಯೇ ಸಿಡಿ ಬಿಡುಗಡೆ ಮಾಡಿದ್ದಾರೆ – ಸಂತ್ರಸ್ತೆ ಎನ್ನಲಾದ ಯುವತಿಯ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಜಾರಕಿಹೊಳಿಯೇ ಸಿಡಿ ಬಿಡುಗಡೆ ಮಾಡಿದ್ದಾರೆ. ಕೆಲಸ ಕೊಡಿಸುವುದಾಗಿ ಹೇಳಿ ನನ್ನ ಮಾನ ಹರಾಜು ಹಾಕಿದ್ದಾರೆ ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದಾಳೆ ಎಂದು ಖಾಸಗಿ ಸುದ್ದಿ ವಾಹಿನಿಗಳು ಸುದ್ದಿ ಪ್ರಸಾರ ಮಾಡುತ್ತಿವೆ.

ನನಗೆ ಯಾವುದೇ ರಾಜಕೀಯ ನಾಯಕರ ಸಂಪರ್ಕ ಇಲ್ಲ. ನನ್ನ ಮಾನ, ಮರ್ಯಾದೆ ಹರಾಜಾಗಿದೆ. ನನ್ನ ತಂದೆ -ತಾಯಿ 2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ನಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ರಮೇಶ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ನನಗೆ ಮೋಸ ಮಾಡಿದ್ದಾರೆ. ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ. ಅದನ್ನು ಬಹಿರಂಗಪಡಿಸಿ ನನ್ನ ಮಾನ ಹರಾಜು ಹಾಕಿದ್ದಾರೆ. ವಿಡೀಯೋ ಯಾರು ಮಾಡಿದ್ದಾರೆ ನನಗೆಗೊತ್ತಿಲ್ಲ ಎಂದು ಯುವತಿ ಹೇಳಿಕೆ ನೀಡಿದ್ದಾಳೆ ಎಂದು ವರದಿಯಾಗುತ್ತಿದೆ.

ಕೆಲಸದ ನೆಪದಲ್ಲಿ ನನ್ನನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದು ಅವಳು ತಿಳಿಸಿದ್ದಾಳೆ ಎಂದು ವಾಹಿನಿಗಳು ವರದಿ ಮಾಡುತ್ತಿವೆ.

ಯುವತಿಯ ಈ ಹೇಳಿಕೆಯಿಂದಾಗಿ ಇಡೀ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದಂತಾಗಿದೆ.

Home add -Advt

ತನಿಖೆ ಬಳಿಕವಷ್ಟೆ ಸತ್ಯಾಸತ್ಯತೆ ತಿಳಿಯಬೇಕಿದೆ.

ಈ ಸಿಡಿ ಪ್ರಕರಣ ಬೆಂಗಳೂರಿಗೆ ಸೀಮಿತವಾಗಿದೆ, ಹಾಗಾಗಿ ಇಲ್ಲೇ ದೂರು ದಾಖಲಿಸಿದ್ದೇನೆ – ರಮೇಶ ಜಾರಕಿಹೊಳಿ

Related Articles

Back to top button