Latest

ಭಾರತದ ಆರ್ಥಿಕತೆ 3 ಟ್ರಿಲಿಯನ್ ಡಾಲರ್ ನಿಂದ 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುವ ಗುರಿ

ಪ್ರಗತಿವಾಹಿನಿ ಸುದ್ದಿ, ನವದಹಲಿ:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋ್ರಸಕ್ತ ಸಾಲಿನ ಲೋಕಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಭಾರತದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್ ನಿಂದ್ 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುವುದು ನಮ್ಮ ಗುರಿ ಎಂದು ಅವರು ತಮ್ಮ ಬಜೆಟ್ ದಿಕ್ಕನ್ನು ಬಿಚ್ಚಿಟ್ಟರು.

ದೇಶದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪಲು 55 ವರ್ಷ ಬೇಕಾಯಿತು. ಆದರೆ, ಭರವಸೆ, ನಂಬಿಕೆ ಮತ್ತು ಮಹತ್ವಾಕಾಂಕ್ಷೆಯಿಂದ ಕೂಡಿದ ಹೃದಯಗಳಿದ್ದಾಗ ಕೇವಲ ನಾವು ಐದು ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್‌ ಅನ್ನು ಸೇರಿಸಿದ್ದೇವೆ.

ಭಾರತಮಾಲಾ ಯೋಜನೆಯಂತೆ ಉಡಾನ್ ಯೋಜನೆ ಕೂಡ ದೇಶದ ಪಟ್ಟಣಗಳನ್ನು ರಾಜಧಾನಿಯೊಂದಿಗೆ ಜೋಡಿಸಲಿದೆ ಎಂದು ಅವರು ತಿಳಿಸಿದರು.

ದೊಡ್ಡ, ಮಧ್ಯಮ ಮತ್ತು ಸಣ್ಣ ಮಟ್ಟದ ಉದ್ಯಮಗಳಿಗೆ ಪಾವತಿ ವೇದಿಕೆಯನ್ನು ಸರ್ಕಾರ ಸ್ಥಾಪಿಸಲಿದೆ. ಇದರಿಂದ ಬಿಲ್ ಹಾಗೂ ಪಾವತಿಗಳನ್ನು ಒಂದೇ ವೇದಿಕೆಯಲ್ಲಿ ಮಾಡಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿ ಯೋಜನೆಯ ಪುನರ್‌ರಚನೆ ನಡೆಯಬೇಕಿದೆ. ಅಧಿಕ ಸಾಮರ್ಥ್ಯದ ರಾಷ್ಟ್ರೀಯ ಹೆದ್ದಾರಿ ಗ್ರಿಡ್ ಸ್ಥಾಪನೆಯಾಗಲಿದೆ.

ರಸ್ತೆ ಮತ್ತು ರೈಲ್ವೆ ಸಾರಿಗೆ ಮೇಲಿನ ಹೊರೆ ತಗ್ಗಿಸಲು ಸರ್ಕಾರವು ಸರಕು ಸಾಗಣಿಕೆಗೆ ನದಿಗಳ ಮೂಲಕ ಜಲಸಾರಿಗೆ ಬಳಸಲು ಆದ್ಯತೆ ನೀಡಲಿದೆ.  ಆಧುನಿಕ ಬಾಡಿಗೆ ಕಾನೂನು ಅಂತಿಮಗೊಳಿಸಿ ರಾಜ್ಯಗಳಿಗೆ ಅಧಿಕಾರ ನೀಡಲಾಗುತ್ತದೆ.

  ವಿದ್ಯುತ್ ಚಾಲಿತ ವಾಹನಗಳ ಬಳಕೆಯ ತ್ವರಿತ ಹೆಚ್ಚಳಕ್ಕೆ ಉತ್ತೇಜನ ನೀಡಲು ಫೇಮ್ II ಯೋಜನೆ ಜಾರಿ ಮಾಡಲಾಗುವುದು. ಅದಕ್ಕೆ ಸೂಕ್ತ ಕ್ರಮಗಳು ಮತ್ತು ಚಾರ್ಜಿಂಗ್ ಸೌಕರ್ಯ ಒದಗಿಸಲಾಗುವುದು. ಇ-ವಾಹನ ಸಬ್ಸಿಡಿಗೆ ಅವಕಾಶಗಳು ಮುಕ್ತವಾಗುತ್ತಿವೆ.

1 ಲಕ್ಷ ಕಿಮೀ ರಸ್ತೆ ಉನ್ನತೀಕರಿಸಲಾಗುವುದು. ಇದಕ್ಕೆ 80 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ವಿವರಿಸಿದರು. 9.64 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗುವುದು.

ರೈತರ ಅಭಿವೃದ್ಧಿಗಾಗಿ ಹಲವಾರ ಯೋಜನೆಗಳನ್ನು ಪ್ರಕಟಿಸಿದ ಅವರು, 10 ಸಾವಿರ ಕೃಷಿಕರ ಸಂಘ ಸ್ಥಾಪಿಸುವುದಾಗಿ ಹೇಳಿದರು. ಅಂತರಜಲ ಹೆಚ್ಚಿಸುವುದಕ್ಕಾಗಿಯೂ ಹಲವಾರು ಯೋಜನೆಗಳನ್ನು ಅವರು ಪ್ರಕಟಿಸಿದ್ದಾರೆ.
(ಬಜೆಟ್ ಭಾಷಣ ಮುಂದುವರಿದಿದೆ.)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button