*ಬೆಳಗಾವಿ: ಬರ ಅಧ್ಯಯನ ತಂಡದ ಎದುರೇ ರೈತನಿಂದ ಆತ್ಮಹತ್ಯೆ ಯತ್ನ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಂದಿನಿಂದ ರಾಜ್ಯದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಬರ ಪರಿಸ್ಥಿತಿ ಅಧ್ಯಯನ ನಡೆಸಲಿದ್ದು, ಬೆಳಗಾವಿ ಜಿಲ್ಲೆಯ ಬೈಲ ಹೊಂಗಲ ಭಾಗದಲ್ಲಿ ಅಧಿಕರಿಗಳು ಪರಿಶೀಲನೆ ನಡೆಸಿದ್ದಾರೆ. ಬರದಿಂದ ಕಂಗೆಟ್ಟ ರೈತನೋರ್ವ ಕೇಂದ್ರ ಅಧಿಕಾರಿಗಳ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬೈಲಹೊಂಗಲ ತಾಲೂಕಿನ ಚಿಚಡಿ ಗ್ರಾಮದಲ್ಲಿ ಕೇಂದ್ರ ಅಧಿಕಾರಿಗಳು ಬರ ಅಧ್ಯಯ ನಡೆಸುತ್ತಿದ್ದ ವೇಳೆ ಕೈಯಲ್ಲಿ ಕ್ರಿಮಿನಾಷಕದ ಬಾಟಲ್ ಹಿಡಿದು ಬಂದ ರೈತ ಮಳೆ ಇಲ್ಲದೇ ಬೆಳ ಸಂಪೂರ್ಣ ನಾಶವಾಗಿದೆ ಕುಟುಂಬ ನಿರ್ವಹಣೆಯೂ ಸಾಧ್ಯವಿಲ್ಲ ಎಂದು ಕಣ್ಣೀರಿಡುತ್ತಾ ಕೈಯಲ್ಲಿದ್ದ ವಿಷದ ಬಾಟಲಿ ತೆಗೆದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಅಧಿಕಾರಿಗಳು, ಪೊಲೀಸರು ರೈತನನ್ನು ತಡೆದು ಸಮಾಧಾನ ಪಡಿಸಿದ್ದಾರೆ. 40 ಎಕರೆಯಲ್ಲಿ ಬೆಳೆದ ಬೆಳೆ ಮಳೆ ಇಲ್ಲದೇ ಸಂಪೂರ್ಣ ನಾಶವಾಗಿದೆ. ಸಾಲ ಮಾಡಿ ಬೆಳೆದಿದ್ದ ಬೆಳೆ ಕೈಗೆ ಬಂದಿಲ್ಲ. ರೈತರಿಗೆ ದಿಕ್ಕು ತೋಚದ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾನೆ. ರೈತನ ಸಂಕಷ್ಟ ಆಲಿಸಿದ ಅಧಿಕರಿಗಳು ಬರ ಪರಿಶೀಲನೆ ಮುಂದುವರೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ