Belagavi NewsBelgaum NewsEducationKannada NewsKarnataka NewsLatest

ಕೆಎಲ್ಎಸ್  ಜಿ.ಐ.ಟಿ. ಯಿಂದ ಸಿಇಟಿ ಅಣಕು ಪರೀಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಾವಿದ್ಯಾಲಯ ಇದೇ ಏಪ್ರಿಲ್ 13 ರಂದು ಒಂದು ದಿನದ ಸಿಇಟಿ ಅಣಕು ಪರೀಕ್ಷೆಯನ್ನು ಆಯೋಜಿಸಿದೆ  ಎಂದು ಪ್ರಾಂಶುಪಾಲರಾದ  ಡಾ ಎಂ.ಎಸ್. ಪಾಟೀಲ್ ತಿಳಿಸಿದ್ದಾರೆ.

ಆಸಕ್ತ ದ್ವಿತೀಯ ಪಿಯುಸಿ , ಸೈನ್ಸ್ ವಿದ್ಯಾರ್ಥಿಗಳು ಮಹಾವಿದ್ಯಾಲಯದ ವೆಬ್ ಸೈಟ್ www.git.edu ಗೆ ಭೇಟಿ ನೀಡಿ ಅಥವಾ https://forms.gle/7LiW9pF5xZcj1F5T7 ಈ ಲಿಂಕ್ ಗೆ ಸಂಪರ್ಕಿಸಿ ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಪರೀಕ್ಷೆಯು ವಿದ್ಯಾರ್ಥಿಗಳನ್ನು ಮುಂಬರುವ ಮುಖ್ಯ ಸಿಇಟಿ ಪರೀಕ್ಷೆಗೆ ಅಣಿಮಾಡಲು ಸಹಾಯಕವಾಗಲಿದೆ.  ಈ ಅಣಕು ಪರೀಕ್ಷೆಯಲ್ಲಿ ಉನ್ನತ  ಶ್ರೇಣಿಗಳಿಸುವ ವಿದ್ಯಾರ್ಥಿಗಳಿಗೆ ನಗದು ಪಾರಿತೋಷಕ ನೀಡಲಾಗುವುದು ಎಂದು ಪತ್ರಿಕಾ  ಪ್ರಕಟಣೆಯಲ್ಲಿ  ತಿಳಿಸಲಾಗಿದೆ.

Related Articles

Back to top button