Kannada NewsKarnataka NewsLatest

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜೊತೆ  ಕೆಎಟಿ ಪೀಠ ಸ್ಥಳ ಪರಿಶೀಲಿಸಿದ ಅಧ್ಯಕ್ಷರು, ಸದಸ್ಯರು; ಬೆಳಗಾವಿ ಕೆಎಟಿ ಪೀಠಕ್ಕೆ ಇನ್ನೂ 20 ಗುಂಟೆ ಜಾಗ ಪಡೆಯಲು ಸೂಕ್ತ ಕ್ರಮಕ್ಕೆ ನಿರ್ಧಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (KAT) ಪೀಠ  ಸ್ಥಾಪನೆ ಸಂಬಂಧ ಕೆಎಟಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಭಾನುವಾರ ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜೊತೆ ಸ್ಥಳ ಪರಿಶೀಲನೆ ನಡೆಸಿ, ಚರ್ಚಿಸಿದರು.

ಬೆಳಗಾವಿಯಲ್ಲಿ ಸ್ಥಾಪನೆ ಮಾಡಲು ಹಿಂಡಲಗಾ ಗ್ರಾಮದ ಸಿಂಧಿ ಕಾಲೋನಿಯ ಕಲ್ಯಾಣ ಮಂಟಪ ಹತ್ತಿರವಿರುವ ಒಂದು ಎಕರೆ ಪ್ರದೇಶವನ್ನು ಈಗಾಗಲೆ ಮಂಜೂರು ಮಾಡಲಾಗಿದೆ. ಭಾನುವಾರ ಆಯ್ಕೆ ಮಾಡಿರುವ ಸ್ಥಳಕ್ಕೆ ತೆರಳಿ ಸಾಧ್ಯಾಸಾಧ್ಯತೆ ಕುರಿತು ಚರ್ಚಿಸಲಾಯಿತು.
  ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಅಧ್ಯಕ್ಷರಾದ  ಆರ್ ಬಿ ಬೂದಿಹಾಳ ಹಾಗೂ   ಸದಸ್ಯರಾದ ಟಿ.ನಾರಾಯಣ ಸ್ವಾಮಿ, ವಿಲೇಖನಾಧಿಕಾರಿ ಎಸ್ ಕೆ ಒಂಟಿಗೋಡಿ,  ಕೆ ಎಸ್ ನಾಗರತ್ನ, ತಹಶಿಲ್ದಾರ ಆರ್.ಕೆ. ಕುಲಕರ್ಣಿ ಹಾಗೂ ಬೆಳಗಾವಿ ವಕೀಲರ ಸಂಘದ ಅಧಕ್ಷ  ಪ್ರಭು ಯತ್ನಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಆಯ್ಕೆ ಮಾಡಿರುವ ಸ್ಥಳವು ಶೇ. 30ರಷ್ಟು ಹಳ್ಳದಿಂದ ಕೂಡಿದ್ದು, ಶೇ. 20ರಷ್ಟು ಸಿಡಿಪಿ ಯೋಜನೆಯ ಪ್ರಕಾರ ರಸ್ತೆಯನ್ನು ಒಳಗೊಂಡಿದೆ. ಹಾಗಾಗಿ ಒಂದು ಎಕರೆಯ ಪೈಕಿ ಶೇ.50ರಷ್ಟು ಜಾಗ ಮಾತ್ರ ಸಿಗುವುದರಿಂದ ಸ್ಥಳದ ಅಭಾವವಾಗಲಿದೆ. ಇದೇ ಹಿಸ್ಸಾದಲ್ಲಿ ಇನ್ನೂ 20 ಗುಂಟೆ ಖಾಲಿ ಸ್ಥಳವಿದ್ದು,  ಈ ಸ್ಥಳವನ್ನು ಕೆಎಟಿಗೆ ಒದಗಿಸಿಕೊಡಲು  ಸರಕಾರದ ಅನುಮೋದನೆ ಪಡೆಯುವಂತೆ ತಹಸಿಲ್ದಾರರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಂಪತ್ ನೇಮಗೌಡರ, ಸಂತೋಷ ಶಹಾಪೂರ, ಎಸ್ ಎನ್ ಗೌಡರ ಹಾಗೂ‌ ಮುಂತಾದವರು ಉಪಸ್ಥಿತರಿದ್ದರು.

 

KAT ಪೀಠ ನಿರ್ಮಾಣಕ್ಕೆ ಬೆಳಗಾವಿಯಲ್ಲಿ ನಿವೇಶನ ಮಂಜೂರು

Home add -Advt

Related Articles

Back to top button