Kannada NewsKarnataka NewsLatestPolitics
*ಕಾಂಗ್ರೆಸ್ ಪಕ್ಷ ಇರೋದೇ ಹಿಂದು ನಾಯಕರನ್ನ ಟಾರ್ಗೆಟ್ ಮಾಡಲು: ಛಲವಾದಿ ನಾರಾಯಣಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷ ಇರೋದೇ ಹಿಂದು ನಾಯಕರನ್ನ ಟಾರ್ಗೆಟ್ ಮಾಡಲು. ದ್ವೇಷ ಭಾಷೆ ಹೆಸರಲ್ಲಿ ಹಿಂದುತ್ವ, ಹಿಂದು ನಾಯಕರ ಹಣಿಯಲು ಕಾಂಗ್ರೆಸ್ ತೀರ್ಮಾನ ಮಾಡಿಕೊಂಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ಹಿಂದು ಕಾರ್ಯಕರ್ತರು ಮೆಸೇಜ್ ಹಾಕಿದ್ರೇ. ಪೊಲೀಸರೇ ದೂರು ತೆಗೆದುಕೊಂಡು ಅರೆಸ್ಟ್ ಮಾಡಿದ ನಿದರ್ಶನ ಇವೆ. ಕಾಂಗ್ರೆಸ್ ವಿರುದ್ಧ ದೂರು ಕೊಟ್ಟರೆ ಎಫ್ಐಆರ್ ಆಗಲ್ಲ ಅರೆಸ್ಟ್ ಆಗಲ್ಲ ಎಂದು ಆರೋಪಿಸಿದರು.
ಈ ಸರ್ಕಾರ ಒಳ ಮೀಸಲಾತಿ ತರ್ತೇವಿ ಅಂತಾ ಹೇಳಿದ್ರೂ. ಒಳ ಮೀಸಲಾತಿ ಯಾವ ಆಧಾರದ ಮೇಲೆ ಕೊಟ್ರೂ? ಅನ್ನೋ ಪ್ರಶ್ನೆ ಇದೆ. ಸಂಪೂರ್ಣವಾದ ಮೀಸಲಾತಿ ಕೊಟ್ಟಿಲ್ಲ ಎಂದರು.




