Belagavi NewsBelgaum NewsKannada NewsKarnataka NewsPolitics

*ಆಶಾ ಭೋಸ್ಲೆ ಅವರ ನಿಧನಕ್ಕೆ ಡಾ. ಪ್ರಭಾಕರ ಕೋರೆ ಕಂಬನಿ* 

ಪ್ರಗತಿವಾಹಿನಿ ಸುದ್ದಿ: ಗಾನ ಗಂಧರ್ವೇ, ಸಂಗೀತ ಲೋಕದ ಧ್ರುವತಾರೆಯಾಗಿದ್ದ ಆಶಾ ಭೋಸ್ಲೆ ಅವರು ನಿಧನರಾಗಿರುವುದು ಸಂಗೀತ ಪ್ರಪಂಚಕ್ಕೆ ಆಘಾತವನ್ನು ಉಂಟು ಮಾಡಿದೆ ಎಂದು ಕೆ ಎಲ್ ಇ ಗೌರವ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಆಶಾ ಭೋಸ್ಲೆಯವರು ಸಾವಿರಾರು ವೈವಿಧ್ಯಮಯ ಗೀತೆಗಳಿಗೆ ಜೀವ ತುಂಬಿದರು. ಇವರ ಸಾಧನೆಯನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ಗುರುತಿಸಿದೆ.

Home add -Advt

ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್, ಗಜಲ್ ಮತ್ತು ಜಾನಪದ ಶೈಲಿಯ ಹಾಡುಗಳನ್ನು ಹಾಡಿ ಕೋಟ್ಯಾಂತರ ಹೃದಯಗಳನ್ನು ಆವರಿಸಿಕೊಂಡಿದ್ದರು. ಭಾರತದ ಪ್ರಾದೇಶಿಕ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ಹಾಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಭಾರತೀಯ ಚಲನಚಿತ್ರ ಹಾಗೂ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅನುಪಮ ಹಾಗೂ ಚಿರಸ್ಮರಣೀಯವಾಗಿದೆ. ಅವರು ಭೌತಿಕವಾಗಿ ನಮ್ಮ ಮುಂದೆ ಇಲ್ಲದಿದ್ದರೂ ಅವರ ಮಧುರಗಾನ ಈ ದೇಶದ ಜೀವನಾಡಿಯಾಗಿದೆ. ಹಾಗಾಗಿ ಆಶಾ ಭೋಸಲೆ  ಅವರು ಅಮರರಾಗಿ ಉಳಿದಿದ್ದಾರೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Related Articles

Back to top button