Latest

ಪತಿಯ ಅಂತ್ಯಕ್ರಿಯೆಗಾಗಿ ಪತ್ನಿಯರ ಕಿತ್ತಾಟ; ಹೆಂಡಿರ ಜಗಳದಲ್ಲಿ ಮೃತದೇಹ ಅನಾಥ

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಎರಡು ದಿನಗಳ ಹಿಂದೆ ಮೃತಪಟ್ಟಿದ್ದ ಗಂಡನ ಅಂತ್ಯಕ್ರಿಯೆಗಾಗಿ ಇಬ್ಬರು ಹೆಂಡತಿಯರು ಕಿತ್ತಾಟ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ವಕೀಲ ಪಾಪಣ್ಣ ಶೆಟ್ಟಿ ಮೃತಪಟ್ಟಿದ್ದು, ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹವಿದೆ. ಅಂತ್ಯಕ್ರಿಯೆಗಾಗಿ ಪಾಪಣ್ಣ ಮೊದಲ ಪತ್ನಿ ಹಾಗೂ ಎರಡನೇ ಪತ್ನಿ ನಡುವೆ ಜಗಳ ನಡೆದಿದೆ. 10 ವರ್ಷಗಳ ಹಿಂದೆಯೇ ಮೊದಲ ಪತ್ನಿ ಪಾಪಣ್ಣನನ್ನು ಬಿಟ್ಟು ಹೋಗಿದ್ದಳು. ಇದರಿಂದಾಗಿ ಪಾಪಣ್ಣ ಎರಡನೇ ಮದುವೆಯಾಗಿದ್ದ. ಎರಡು ದಿನಗಳ ಹಿಂದೆ ಪಾಪಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದು, ಅಂತ್ಯಕ್ರಿಯೆ ವೇಳೆ ಇಬ್ಬರು ಹೆಂಡತಿಯರ ಕಿತ್ತಾಟ ಆರಂಭವಾಗಿದೆ.

ಪತಿ ಸಾವಿನ ಬಗ್ಗೆ ಹಲವು ಅನುಮಾನವಿದೆ ಎಂದು ದೂರು ನೀಡಿರುವ ಮೊದಲ ಪತ್ನಿ, ಮೃತದೇಹವನ್ನು ತನಗೆ ಒಪ್ಪಿಸುವಂತೆ ಕೇಳಿದ್ದಾಳೆ. ಆದರೆ ಇದಕ್ಕೆ ಒಪ್ಪದ ಎರಡನೇ ಪತ್ನಿ ಹಾಗೂ ಮನೆಯವರು ಮೃತದೇಹವನ್ನು ತಮಗೆ ಕೊಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಆಸ್ತಿಗಾಗಿ ಮೊದಲ ಪತ್ನಿ ಕ್ಯಾತೆ ತೆಗೆದಿದ್ದಾಳೆ ಎಂದು ಆರೋಪಿಸಿದ್ದಾರೆ. ಇಬ್ಬರು ಹೆಂಡಿರ ಜಗಳದಲ್ಲಿ ಮೃತದೇಹ ಅನಾಥವಾಗಿ ಇನ್ನೂ ಆಸ್ಪತ್ರೆಯಲ್ಲಿಯೇ ಇದೆ. ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಕೋರ್ಟ್ ಮೆಟ್ಟಿಲೇರಿದೆ.
ಅಪ್ರಾಪ್ತರ ಜೊತೆ ಅಪ್ರಾಪ್ತೆಯರು ಪರಾರಿ; ಪತ್ತೆಯಾಗಿದ್ದೆಲ್ಲಿ ಗೊತ್ತೆ?

Home add -Advt

Related Articles

Back to top button