
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ವಾಣಿಜ್ಯೋದ್ಯಮ ಸಂಘದ ಆಡಳಿತ ಮಂಡಳಿಗೆ ಇಂಡಸ್ಟ್ರಿ ಮತ್ತು ವ್ಯಾಪಾರ ವಿಭಾಗದಿಂದ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಿತು.
ಎರಡೂ ವಿಭಾಗದಲ್ಲಿ ಡೆವಲಪ್ ಮೆಂಟ್ ಪ್ಯಾನೆಲ್ ಭರ್ಜರಿ ಜಯಭೇರಿ ಭಾರಿಸಿದೆ. ಗೆದ್ದವರ ವಿವರ ಹೀಗಿದೆ:
ಟ್ರೇಡಿಂಗ್ ವಿಭಾಗದಿಂದ 5 ಸ್ಥಾನಗಳಿಗೆ 8 ಜನ ಸ್ಪರ್ಧಿಸಿದ್ದರು. 504 ಜನರು ಮತ ಚಲಾಯಿಸಿದ್ದರು. ಅವರ ಪೈಕಿ ಹೇಮೇಂದ್ರ ಪೋರವಾಲ(343), ರಾಜೇಂದ್ರ ಮುತಗೇಕರ್ (300), ಸಂಜಯ ಪೋತದಾರ (367), ಸಂತೋಷ ಕಲಘಟಗಿ (300) ಮತ್ತು ವಿಕ್ರಮ್ ಜೈನ್ (275) ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸುಧೀರ್ ಚೌಗಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂಡಸ್ಟ್ರಿ ಸೆಕ್ಟರ್ ನಿಂದ 3 ಸ್ಥಾನಗಳಿಗೆ 4 ಜನರು ಸ್ಪರ್ಧಿಸಿದ್ದರು. ಒಟ್ಟೂ 220 ಜನರು ಮತ ಚಲಾಯಿಸಿದ್ದರು. ರೋಹನ್ ಜುವಳಿ (216), ಪ್ರಭಾಕರ ನಾಗರಮುನ್ನೋಳಿ (211) ಮತ್ತು ಆನಂದ ದೇಸಾಯಿ (208) ಆಯ್ಕೆಯಾದರು. ಸತೀಶ್ ಕುಲಕರ್ಣಿ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ