ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಫುಟ್ ಬಾಲ್ ತಂಡ ಇತ್ತೀಚಿಗೆ ನಿಪ್ಪಾಣಿಯಲ್ಲಿ ನಡೆದ ಫುಟ್ ಬಾಲ್ ಪಂದ್ಯಾವಳಿಯನ್ನು ಗೆದ್ದು ಚಾಂಪಿಯನಶಿಪ್ ಪ್ರಶಸ್ತಿಯನ್ನು ಗಳಿಸಿತು.
ಜಿಐಟಿ ಅರ್ಹತಾ ಸುತ್ತಿನಲ್ಲಿ ನಿಡಸೋಸಿ ಇಂಜಿನಿಯರಿಂಗ್ ಕಾಲೇಜ್, ನಿಪ್ಪಾಣಿಯ ಕೆಎಲ್ಇ ಇಂಡಿಪೆಂಡೆಂಟ್ ಕಾಲೇಜು, ಬೆಳಗಾವಿಯ ಕೆಎಲ್ ಎಸ್ ಗೋಗಟೆ ಕಾಮರ್ಸ್ ಕಾಲೇಜ್ ಮತ್ತು ನಿಪ್ಪಾಣಿಯ ವಿಎಸ್ಎಂ ತಂಡಗಳನ್ನು ಸೋಲಿಸಿ ಫೈನಲ್‌ಗೆ ತಲುಪಿತು.
ಫೈನಲ್‌ನಲ್ಲಿ ಜಿಐಟಿ ನಿಪ್ಪಾಣಿಯ ದೇವ್‌ಚಂದ್ ಪದವಿ ಕಾಲೇಜನ್ನು ೨-೦ ಗೋಲುಗಳಿಂದ ಸೋಲಿಸಿತು. ಜಿಐಟಿ ವಿದ್ಯಾರ್ಥಿಗಳಾದ ರಾಹುಲ್ ಗುರವ್ ಅವರನ್ನು ಅತ್ಯುತ್ತಮ ಫಾರ್ವರ್ಡ್ ಆಟಗಾರ ಎಂದು ಗೌರವಿಸಲಾಯಿತು ಮತ್ತು ಕರಣ್ ಮಾನೆ ಅತ್ಯುತ್ತಮ ರಕ್ಷಣಾ ಆಟಗಾರ ಪ್ರಶಸ್ತಿ ಪಡೆದರು.
ಜಿಐಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ ಆರ್ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಡಿ. ಎ. ಕುಲಕರ್ಣಿ, ದೈಹಿಕ ಶಿಕ್ಷಣ ವಿಭಾಗದ ಚೇರಮನ್ ಪ್ರೊ. ರಮೇಶ ಮೇದಾರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಿ ವಿ ಕಡಗದಕೈ, ಕ್ರಾಂತಿ ಕುರಣಕರ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ