Belagavi NewsBelgaum NewsKannada NewsKarnataka NewsLatestPolitics
*ಬೆಳಗಾವಿಗೆ ಹೊಸ ಯೋಜನೆ: ಅಧಿಕಾರಿಗಳ ಜೊತೆ ಸಚಿವ ಜಾರಕಿಹೊಳಿ ಚರ್ಚೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಇಲಾಖೆಯ ಆರ್ಕಿಟೆಕ್ಚರ್ ವಿಭಾಗ ಹಾಗೂ ಮುಖ್ಯ ಅಭಿಯಂತರರ ಕಚೇರಿಗೆ ಭೇಟಿ ನೀಡಿ ಬೆಳಗಾವಿಯ ಹೊಸ ಯೋಜನೆಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದರು.
ಸಚಿವ ಜಾರಕಿಹೊಳಿ ಅವರು ಆರ್ಕಿಟೆಕ್ಚರ್ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ವಿವಿಧ ಯೋಜನೆಗಳ ಮಾಹಿತಿ ಪಡೆದರು. ಇಲಾಖೆಯ ವಿವಿಧ ಹೊಸ ಯೋಜನೆಗಳು ಮತ್ತು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣ ನವೀಕರಣ, ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿ.ಎನ್.ಪಾಟೀಲ, ಮುಖ್ಯ ವಿನ್ಯಾಸಕಾರ, ಉಪವಿನ್ಯಾಸಕಾರ, ಮುಖ್ಯ ಅಭಿಯಂತರ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.