Cancer Hospital 2
Beereshwara 36
LaxmiTai 5

ಪಡಿತರ ವಿತರಣೆ ಹಾಗೂ ನೇರ ನಗದು ವರ್ಗಾವಣೆ

Anvekar 3


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಯೋಜನೆಯಡಿ ಬಿಡುಗಡೆಯಾದ ಆಹಾರ ಧಾನ್ಯವನ್ನು ಜುಲೈ-೨೦೨೩ ರಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ವಿತರಣೆ ಹಾಗೂ ನೇರ ನಗದು ವರ್ಗಾವಣೆ ಮಾಡಲಾಗುವುದು.
ಪಡಿತರ ವಿತರಣೆ ಹಾಗೂ ನೇರ ನಗದು ವರ್ಗಾವಣೆ ವಿವರ:
ಅಂತ್ಯೋದಯ(ಎಎವೈ)  NFSA ಪ್ರತಿ ಪಡಿತರ ಚೀಟಿಗೆ ಅಕ್ಕಿ-೩೫ ಕೆ.ಜಿ. ಉಚಿತ, ಪಿ.ಎಚ್.ಎಚ್ (ಬಿಪಿಎಲ್) (ಆದ್ಯತಾ) ಓಈSಂ ಪ್ರತಿ ಸದಸ್ಯರಿಗೆ ಅಕ್ಕಿ-೦೫ ಕೆ.ಜಿ. ಉಚಿತ, ಎನ್‌ಪಿಹೆಚ್‌ಹೆಚ್ (ಎಪಿಎಲ್) (ಆದ್ಯತೇತರ) (ಒಪ್ಪಿತ ಪಡಿತರ ಚೀಟಿ) – ಏಕ ಸದಸ್ಯ ಪಡಿತರ ಚೀಟಿಗೆ ಅಕ್ಕಿ-೦೫ ಕೆ.ಜಿ, ೨ ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ ಅಕ್ಕಿ-೧೦ ಕೆ.ಜಿ. ಪ್ರತಿ ಕೆ.ಜಿ.ಗೆ ರೂ.೧೫/- ಇರಲಿದೆ.
( Portability) ಅಂತರ್‌ರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯವವರಿಗೆ ಕೇಂದ್ರ ಸರ್ಕಾರದ ಪಡಿತರ ವಿತರಣಾ ಪ್ರಮಾಣ ೫ ಕೆ.ಜಿ ಪ್ರತಿ ಸದಸ್ಯರಿಗೆ ಉಚಿತವಾಗಿರುತ್ತದೆ.
ಜುಲೈ-೨೦೨೩ನೇ ಮಾಹೆಯ ಅಂತ್ಯದೊಳಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ಅಂತ್ಯೋದಯ ಮತ್ತು ಆದ್ಯತಾ(ಬಿ.ಪಿ.ಎಲ್) ಪಡಿತರ ಚೀಟಿದಾರರಿಗೆ ಹೊಸ ಸರಕಾರ ಘೊಷಿಸಿದ ಗ್ಯಾರಂಟಿ ಯೋಜನೆಯಡಿ ೦೫ಕೆ.ಜಿ ಅಕ್ಕಿ ಬದಲಾಗಿ ಪ್ರತಿ ಕೆ.ಜಿ ಗೆ ರೂ.೩೪/-ರಂತೆ ನೇರವಾಗಿ ಸಂಬಂದಪಟ್ಟ ಫಲಾನುಬವಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆ ಮಾಡಲಾಗುವುದು. ಇದಕ್ಕೆ ಸಂಬಂದಿಸಿದಂತೆ ಪಡಿತರ ಚೀಟಿಯಲ್ಲಿರುವ ಕುಟುಂಬ ಮುಖ್ಯಸ್ಥರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ ಅಥವಾ ಪೋಸ್ಟ ಆಫೀಸಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರತಕ್ಕದ್ದು ಹಾಗೂ ಸದರ ಉಳಿತಾಯ ಖಾತೆ ಇ-ಕೆ.ವೈ.ಸಿ ಮಾಡಿಕೊಂಡಿರತಕ್ಕದ್ದು, ಅಲ್ಲದೆ ಕಳೆದ ಮೂರು ತಿಂಗಳಿನಿಂದ ಸತತವಾಗಿ ಪಡಿತರ ಪಡೆದಿರತಕ್ಕದ್ದು ಅಂತಹ ಫಲಾನುಬವಿಗಳಿಗೆ ಡಿ.ಬಿ.ಟಿ ಮೂಲಕ ಇಲಾಖೆಯಿಂದ ಹಣ ವರ್ಗಾವಣೆ ಮಾಡಲಾಗುವುದು.
ಜಿಲ್ಲೆಯಲ್ಲಿ ೬೮,೬೩೬ ಅಂತ್ಯೋದಯ, ೧೦,೮೦,೮೮೦ ಬಿಪಿಎಲ್ ಹಾಗೂ ೩,೨೧,೨೩೭ ಎಪಿಎಲ್ ಪಡಿತರ ಚೀಟಿಗಳು ಸೇರಿ ಒಟ್ಟು ೧೪,೭೦,೭೫೩ ಪಡಿತರ ಚೀಟಿಗಳು ಚಾಲ್ತಿಯಲ್ಲಿರುತ್ತವೆ.
ಜುಲೈ ೧ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಿಗ್ಗೆ ೭ ರಿಂದ ರಾತ್ರಿ ೯ ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಯಡಿ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಕಾರಣ ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬಹುದು.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರಿಗೆ ಈ ಮಾಹೆ ಅಂತಿಮ ಗಡುವು ನೀಡಲಾಗಿರುತ್ತದೆ.
ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು. ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-೧೯೫೫ ರಡಿ ಕ್ರಮ ಜರುಗಿಸಲಾಗುವುದು.
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ, ಸಂಬಂಧಿಸಿದ ತಹಶೀಲ್ದಾರ ಕಚೇರಿ ಅಥವಾ ಜಂಟಿ ನಿರ್ದೇಶಕರ ಕಚೇರಿ ಆಹಾರ ಇಲಾಖೆ ಇವರಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Emergency Service

Bottom Add3
Bottom Ad 2