ಜವಾಹರ್ ನವೋದಯ ವಿದ್ಯಾಲಯ: ೬ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ೨೦೨೪-೨೫ ನೇ ಸಾಲಿಗೆ VI ನೇ ತರಗತಿಗೆ ಆಯ್ಕೆ ಪರೀಕ್ಷೆ (JNVST) ಮೂಲಕ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಗಸ್ಟ್ ೧೦, ೨೦೨೩ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ನವೆಂಬರ್ ೪, ೨೦೨೩(ಚಳಿಗಾಲ-ಜೆಎನ್‌ವಿ), ಹಾಗೂ ಜನವರಿ.೨೦ ೨೦೨೪(ಬೇಸಿಗೆ-ಜೆಎನ್‌ವಿ) ರಂದು ಪರಿಕ್ಷೆ ನಡೆಯಲಿವೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಅಭ್ಯರ್ಥಿಗಳು ೨೦೨೩-೨೪ ರ ಶೈಕ್ಷಣಿಕ ಅವಧಿಯಲ್ಲಿ ಸರ್ಕಾರಿ/ಸರ್ಕಾರೇತರ ಶಾಲೆಗಳಲ್ಲಿ ೫ ನೇ ತರಗತಿಯಲ್ಲಿ ಓದುತ್ತಿರುವ ಜಿಲ್ಲೆಯ ಪ್ರಮಾಣಿಕ ನಿವಾಸಿಗಳಾಗಿರಬೇಕು.
ಪ್ರವೇಶವನ್ನು ಬಯಸುವ ಅಭ್ಯರ್ಥಿಗಳು ಎಓಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮಾನ್ಯತೆ ಪಡೆದ ಶಾಲೆಯವರಾಗಿರಬೇಕು.
ಪ್ರತಿ ತರಗತಿಯಲ್ಲಿ ಪೂರ್ಣ ಶೈಕ್ಷಣಿಕ ಅವಧಿಯನ್ನು ಅಧ್ಯಯನ ಮಾಡಿರಬೇಕು ಮತ್ತು ಸರ್ಕಾರಿ ಅಥವಾ ಸರ್ಕಾರೇತರ ಶಾಲೆಗಳಿಂದ III ಮತ್ತು IV ತರಗತಿಗಳಲ್ಲಿ ಉತ್ತೀರ್ಣರಾಗಿರಬೇಕು. ಮೇ ೦೧, ೨೦೧೨ ರಿಂದ ಜುಲೈ ೩೧, ೨೦೧೪ ರೊಳಗೆ ಜನಿಸಿದವರಾಗಿರಬೇಕು.
ಮೀಸಲಾತಿ:
ಜಿಲ್ಲೆಯಲ್ಲಿ ಕನಿಷ್ಠ ೭೫% ಸೀಟುಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿರುತ್ತವೆ. ಭಾರತ ಸರ್ಕಾರದ ಮೀಸಲಾತಿ ನಿಯಮಾವಳಿಗಳ ಪ್ರಕಾರ SC.ST.OBC ಮತ್ತು ದಿವ್ಯಾಂಗದವರಿಗೆ ಮೀಸಲಾತಿ ಇರುತ್ತದೆ. ಕನಿಷ್ಠ ೧/೩ ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಕಾಯ್ದಿರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ www.navodaya.gov.in ಗೆ ಭೇಟಿ ನೀಡಬಹುದು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ