ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ: ಮಿನಿ ಉದ್ಯೋಗ ಮೇಳ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಜು. ೧೩ ೨೦೨೩ ರಂದು ಮುಂಜಾನೆ ೯ ರಿಂದ ಮದ್ಯಾಹ್ನ ೧.೩೦ ಗಂಟೆಯವರೆಗೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾಮತ್ತು ಡಿ-ಪಾರ್ಮಾಸಿ, ಡಿಎಚ್‌ಐ ಹಾಗೂ ಯಾವುದೇ ಪದವಿ ಮತ್ತು ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ ಮಿನಿ ಉದ್ಯೋಗ ಮೇಳ ವನ್ನು (Mini Job Fair) ಬೆಳಗಾವಿಯ ಬೆನನ್ ಸ್ಮಿತ್ ಮೆಥೋಡಿಸ್ಟ್ ಪದವಿ ಕಾಲೇಜನಲ್ಲಿ ಆಯೋಜಿಸಲಾಗಿದೆ.
ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು https://forms.gle/TvdY2qaBtiEV7esc8 ಈ ವೆಬ್‌ಸೈಟ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಮಿನಿ ಉದ್ಯೋಗಮೇಳದಲ್ಲಿ ಪ್ರತಿಷ್ಠಿತ ೭ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಹೆಚ್ಚಿನ ಮಾಹಿತಿಗಳಿಗಾಗಿ ವೈಬ್‌ಸೈಟ https://forms.gle/TvdY2qaBtiEV7esc8 ಗೆ ಭೇಟಿ ನೀಡಬಹುದಾಗಿದೆ ಹಾಗೂ ಮೊಬೈಲ್ ಸಂಖ್ಯೆ: ೮೧೪೭೬೮೫೪೭೯ ಗೆ ಸಂಪರ್ಕಿಸಬಹುದು, ಎಂದು, ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ