Belagavi NewsBelgaum NewsKannada NewsKarnataka News

ಕೃತಕ ಆಭರಣಗಳ ತಯಾರಿಕೆ ಹಾಗೂ ಕೋಳಿ ಸಾಕಾಣಿಕೆ ಅರ್ಜಿ ಅಹ್ವಾನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೃತಕ ಆಭರಣಗಳ ತಯಾರಿಕೆಯ((Costume Jewelry Udyami)) ೧೩ ದಿನಗಳ ತರಬೇತಿ ಮತ್ತು ಕೋಳಿ ಸಾಕಾಣಿಕೆ(Poultry) ೧೦ ದಿನಗಳ ತರಬೇತಿ ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಹತೆಗಳು: ೧೮ ರಿಂದ ೪೫ ವಯಸ್ಸಿನವರಾಗಿರಬೇಕು, ಗಾಮೀಣ ಪ್ರದೇಶದವರಾಗಿರಬೇಕು, BPL/ಜಾಬ್ ಕಾರ್ಡ ಹೊಂದಿರಬೇಕು.
ದಾಖಲೆಗಳು: ಃPಐ/ ಜಾಬ್ ಕಾರ್ಡ, ಆಧಾರ ಕಾರ್ಡ,ಬ್ಯಾಂಕ ಪಾಸ್ ಬುಕ್ಕ, ೩ ಭಾವಚಿತ್ರಗಳುನ್ನು ಸಲ್ಲಿಸಬೇಕು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
ತರಬೇತಿಗೆ ಅರ್ಜಿ ನೀಡುವವರು ಕೃತಕ ಆಭರಣಗಳ ತಯಾರಿಕೆ ಮತ್ತು ಕೋಳಿ ಸಾಕಾಣಿಕೆ, ಈ ಎರಡು ತರಬೇತಿಯಲ್ಲಿ ಒಂದು ತರಬೇತಿಗೆ ಅರ್ಜಿ ನೀಡುಬಹುದು.
ಜು. ೧೬ ೨೦೨೩, ರ ಒಳಗಾಗಿ ಅರ್ಜಿಯನ್ನು ಸಂಸ್ಥೆಯ ಅರ್ಜಿ ನಮೂನೆಯಲ್ಲಿ ಅಥವಾ ಬಿಳಿಹಾಳಿಯಲ್ಲಿ ನೇರವಾಗಿ ಕಾರ್ಯಾಲಯಕ್ಕೆ, ಪೋಸ್ಟ್ ಮುಖಾಂತರ ಅಥವಾ ಇಮೇಲ್ [email protected] ಗೆ ಕಳುಹಿಸಬಹುದಾಗಿದೆ.
ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಗೆ, ನಿರುದ್ಯೋಗಿಗಳಿಗೆ, ಮತ್ತು ಮಹಿಳಾ ನಿರುದ್ಯೋಗಿಗಳಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‌ಸೆಟಿ), ಪ್ಲಾಟ ನಂ. ಸಿ ಎ-೦೩ (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಎರಿಯಾ, ಆಟೋ ನಗರ. – ೫೯೦೦೧೫ ಅಥವಾ ದೂರವಾಣಿ ಸಂಪರ್ಕ ಸಂಖ್ಯೆ: ೦೮೩೧-೨೪೪೦೬೪೪, ೮೨೯೬೭೯೨೧೬೬, ೯೮೪೫೭೫೦೦೪೩, ೮೮೬೭೩೮೮೯೦೬, ೮೦೫೦೪೦೬೮೬೬, ೯೪೪೯೮೬೦೫೬೪ ನಂ. ಗೆ ಬೆಳ್ಳಿಗ್ಗೆ ೯.೩೦ ರಿಂದ ಸಾಯಂಕಾಲ ೬. ಗಂಟೆ ವರೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button