ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರ್ಯಾಪರ್, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹೊಸ ವರ್ಷದ ಸಂಭ್ರಮಕ್ಕೆ ತಮ್ಮ ಭಾವಿ ಪತ್ನಿ ನಿವೇದಿತಾ ಗೌಡಗೆ ಕೆನಡಾದಿಂದ ಕ್ಯೂಟ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.
ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಈ ಜೋಡಿ ಈಗಾಗಲೇ ಮದುವೆ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಚಂದನ್ ಹಾಗೂ ನಿವೇದಿತಾ ಈ ಬಾರಿ ಹೊಸ ವರ್ಷಾಚರಣೆಯನ್ನು ಒಟ್ಟಿಗೆ ಆಚರಿಸಿಲ್ಲ. ಕಾರಣ ಚೆಂದನ್ ಶೆಟ್ಟಿ ಕಾರ್ಯಕ್ರಮವೊಂದಕ್ಕೆ ಕೆನಡಾಗೆ ತೆರಳಿದ್ದಾರೆ. ಹೀಗಾಗಿ ಅಲ್ಲಿಂದಲೇ ನಿವೇದಿತಾಗೆ ಒಂದು ವಿಡಿಯೋ ಮಾಡಿ ಸರ್ಪ್ರೈಸ್ ನೀಡಿದ್ದಾರೆ.
ಕೆನಡಾದಲ್ಲಿ ಸ್ನೋ ಏಂಜಲ್ ತಯಾರಿಸಿ, ಆ ವಿಡಿಯೋನ ನಿವೇದಿತಾ ಗೌಡಗೆ ಕಳುಹಿಸಿದ್ದಾರೆ ಚಂದನ್. ಈ ಪ್ರೀತಿಯ ಸರ್ಪ್ರೈಸ್ ಕಂಡು ಸಂತಸಗೊಂಡಿರುವ ನಿವೇದಿತಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೇ ”ಇದು ತುಂಬಾ ಕ್ಯೂಟ್ ಆಗಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. 2020ರ ಹೊಸ ವರ್ಷದಂದು ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ. ಹೊಸ ವರ್ಷದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲರಿಗೂ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ