ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ: ನಾಲ್ವರ ಸಾವು

ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ : ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಭಿವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳದ ಬಳಿ ನಡೆದಿದೆ.

ಇಲ್ಲಿನ ಮುಧೋಳ ಬಳಿಯ ಶಿರೋಳ ಗ್ರಾಮದಲ್ಲಿ ವೇಗವಾಗಿ ಬರುತ್ತಿದ್ದ ಎರಡೂ ವಾಹನಗಳು ತಡರಾತ್ರಿ ಪರಸ್ಪರ ಡಿಕ್ಕಿಹೊಡೆದು ಈ ದುರ್ಘಟನೆ ಸಂಭವಿಸಿದೆ. ಆಪಘಾತದಲ್ಲಿ ಹನುಮಂತ (21), ರಿಯಾಜ್ (25) ಬಾಲಪ್ಪ (34), ಸಿದ್ದರಾಯ (34) ಮೃತಪಟ್ತಿದ್ದಾರೆ. ಮೃತ ವ್ಯಕ್ತಿಗಳು ಗೋಠೆ, ಖಾಜಿ ಬೀಳಗಿ ಗ್ರಾಮದವರು ಎನ್ನಲಾಗಿದೆ.

Home add -Advt

ಕಾರಿನಲ್ಲಿದ್ದ ನಾಲ್ವರೂ ಧಾರವಾಡಕ್ಕೆ ಹೊರಟಿದ್ದರು. ಟ್ರ್ಯಾಕ್ಟರ್  ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button