Film & Entertainment

*ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ-ನಿವೇದಿತಾ*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ಕ್ಯೂಟ್ ಜೋಡಿಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದು, ಹಲವಾರು ಊಹಾಪೋಹಗಳಿಗೆ, ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ, ನಾವಿಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಕಾನೂನು ಪ್ರಕಾರ ಡಿವೋರ್ಸ್ ಪಡೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವಾರು ಅನಗತ್ಯ ಸುದ್ದಿಗಳು ಕೇವಲ ವದಂತಿ. ಅಪಪ್ರಚಾರ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಇದರಿಂದ ನಮಗೂ, ನಮ್ಮ ಕುಟುಂಬದವರಿಗೂ ನೋವಾಗುತ್ತದೆ ಎಂದು ತಿಳಿಸಿದ್ದಾರೆ.

ನಮ್ಮಿಬ್ಬರ ಆಲೋಚನೆ, ಜೀವನ ಶೈಲಿ ಬೇರೆ ಬೇರೆಯಾಗಿತ್ತು. ನಿತ್ಯವೂ ಮನಸ್ತಾಪ ಬರುತ್ತಿತ್ತು. ಹಾಗಾಗಿ ಇಬ್ಬರೂ ಒಟ್ಟಿಗೆ ಕುಳಿತು ನಿರ್ಧರಕ್ಕೆ ಬಂದೆವು. ಮನೆಯವರಿಗೂ ವಿಷಯ ಹೇಳಿದೆವು. ನಾವಿಬ್ಬರೂ ಪರಸ್ಪರ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ ಸಾಧ್ಯವಾಗಿಲ್ಲ. ಪ್ರತಿ ಬಾರಿ ಜಗಳ, ಮನಸ್ತಾಪ ಮಾಡಿಕೊಂಡು ಇರುವುದು ಸರಿಯಲ್ಲ ಎನಿಸಿತು. ಹಾಗಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.

Home add -Advt

ನಾವು ಡಿವೋರ್ಸ್ ಪಡೆದಿದ್ದಕ್ಕೆ ಸಾಕಷ್ಟು ವದಂತಿಗಳು ಹಬ್ಬುತ್ತಿವೆ. ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಆರೋಪ ಸರಿಯಲ್ಲ. ನಿವೇದಿತಾ ನನ್ನಿಂದ ಕೋಟ್ಯಂತರ ರೂಪಾಯಿ ಜೀವನಾಂಶವನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸುಳ್ಳು ಸುದ್ದಿ. ನಿವೇದಿತಾ ಯಾವುದೇ ಜೀವನಾಂಶವನ್ನು ಕೇಳಿಲ್ಲ. ಇನ್ನು ಮಗುವಿನ ವಿಚಾರಕ್ಕೆ ಡಿವೋರ್ಸ್ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಕೂಡ ಸುಳ್ಳು ಮಗುವಿನ ವಿಚರವಾಗಿ ವಿಚ್ಛೇದನ ಪಡೆಯುತ್ತಿಲ್ಲ. ಇನ್ನು ನಿವೇದಿತಾಗೆ 3ನೇ ವ್ಯಕ್ತಿ ಜೊತೆ ಸಂಬಂಧವಿದೆ ಎಂದು ಆರೋಪಿಸಲಾಗುತ್ತಿದೆ. ಇಂತಹ ಆರೋಪಗಳನ್ನು ಮಾಡುವುದು ವಿಕೃತ ಮನಸ್ಥಿತಿ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಅತಹ ಯಾವ ಕಾರಣಕ್ಕೂ ಡಿವೋರ್ಸ್ ಪಡೆದುಕೊಂಡಿಲ್ಲ. ನಮ್ಮಿಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button