ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವು ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಈ ನಡುವೆ ದಾವಣಗೆರೆ ಪೊಲೀಸರ ವಿರುದ್ಧ ರೇಣುಕಾಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಂದ್ರಶೇಖರ್ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದರೂ ಪೊಲೀಸರಿಗೆ ಆತನನ್ನು ಹುಡುಕಲು ಆಗಿಲ್ಲ. ನನ್ನ ಮಗನನ್ನು ಹುಡುಕಿದ್ದು ಪೊಲೀಸರಲ್ಲ. ಪಕ್ಷದ ಕಾರ್ಯಕರ್ತರು. ತುಂಗಾ ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿದೆ ಎಂದು ಹುಡುಕಿದ್ದು, ಆತನನ್ನು ಪತ್ತೆ ಮಾಡಿದ್ದು ಪಕ್ಷದ ಕಾರ್ಯಕರ್ತರು. ಅವರ ಅಂತ:ಕರಣ, ಪ್ರೀತಿ ಅಸಾಧಾರಣವಾದದ್ದು ಎಂದು ಹೇಳಿದ್ದಾರೆ.
ಚಂದ್ರಶೇಖರ್ ಕಾರು ಅಪಘಾತವಾಗಿ ಬಿದ್ದಿದ್ದಲ್ಲ. ಆತನಿಗೆ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು. ಆರೋಪಿಗಳು ಯಾರೆಂದು ಗೊತ್ತಾಗಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಚಂದ್ರಶೇಖರ್ ಸಾವಿಗೆ ಮತ್ತೊಂದು ಟ್ವಿಸ್ಟ್; ಮೊಬೈಲ್ ಗೆ ಬಂದ ಆ ಕರೆ ಯಾವುದು…?
https://pragati.taskdun.com/latest/chandrashekhar-death-casetwistphone-callm-p-renukacharya/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ