Latest

ಮೋದಿಯವರ ಜನಪರ ಕೆಲಸಗಳು ಅರ್ಧಕ್ಕೇ ನಿಲ್ಲಬಾರದು -ಕವಟಗಿಮಠ

ಹಳ್ಳೂರ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿಯವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಲು ಹಾಗೂ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಅವರು ಹಳ್ಳೂರ ಗ್ರಾಮದ ನೇಸೂರ ತೋಟದಲ್ಲಿ ಶುಕ್ರವಾರ ನಡೆದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಮತ್ತು ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳನ್ನು ಜನ ಹೊಗಳುತ್ತಿದ್ದಾರೆ ಮತ್ತು ಜನೌಷಧಿಯ ಮೂಲಕ ಕಡಿಮೆ ಬೆಲೆಯಲ್ಲಿ ಔಷಧಿಯ ವ್ಯವಸ್ಥೆ ಮಾಡಲಾಗಿದೆ, ಆಯುಷ್ಮಾನ್ ಭಾರತದ ಮೂಲಕ ಕೋಟ್ಯಂತರ ಭಾರತೀಯರಿಗೆ ಉಚಿತ ಚಿಕಿತ್ಸೆಯ ಅವಕಾಶವನ್ನು ನೀಡಲಾಗಿದೆ, ಮೋದಿಯವರು ಆರಂಭಿಸಿರುವ ಈ ಕೆಲಸ ಅರ್ಧಕ್ಕೇ ನಿಲ್ಲಬಾರದು ಎಂದು ಹೇಳಿದರು.
ಸುರೇಶ ಪಾಟೀಲ ಮಾತನಾಡಿ, ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಮನೆ-ಮನೆಗಳಿಗೆ ತೆರಳಿ ಮೋದಿ ಸರಕಾರದ ಸಾಧನೆಗಳನ್ನು ಹಾಗೂ ಅವರು  ರೂಪಿಸಿರುವಂತ ಒಳ್ಳೆಯ ಯೋಜನೆಗಳ ಬಗ್ಗೆ ಮನ ಮುಟ್ಟುವಂತೆ ಮಾಡಿ, ನರೇಂದ್ರ ಮೋದಿರವರನ್ನು ಪ್ರಧಾನಿಯಾಗಿ ಮತ್ತೊಮ್ಮೆ ನೋಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಿಂಗಪ್ಪ ಕುರಬೇಟ ಮಾತನಾಡಿ, ಈ ಬಾರಿ ಮೋದಿಯವರನ್ನೇ ಮತ್ತೊಮ್ಮೆ ಪ್ರಧಾನಿಯಾಗಿಸಿ ಹಳ್ಳಿಗಳ ಅಭಿವೃದ್ಧಿಗೆ ದುಡಿಯವ, ಭಾರತಾಂಬೆಯ ಸೇವಕನಾಗಿರುವ ಮೋದಿಯವನ್ನು ಗೆಲಿಸುವ ಗುರಿ ನಮ್ಮದು ಎಂದರು.
ಜಗದೀಶ ಹಿರೇಮನಿ, ಗುಳಪ್ಪ ಹೊಸಮನಿ, ಸುಭಾಷ ಪಾಟೀಲ, ಪ್ರಕಾಶ ಮಾದರ, ಗೊವಿಂದ ಕೊಪ್ಪದ, ಹಣಮಂತ ತೇರದಾಳ, ಸುರೇಶ ಡಬ್ಬನ್ನವರ, ಕುಮಾರ ಲೋಕನ್ನವರ, ಬಸಪ್ಪ ಸಂತಿ, ಬಸಪ್ಪ ಹಡಪದ, ಸುರೇಶ ಕತ್ತಿ, ಬಾಳೇಶ ನೇಸೂರ, ಶ್ರೀಶೈಲ ಬಾಗೋಡಿ, ಲಕ್ಷ್ಮಣ ಕತ್ತಿ, ಕೆಂಪಣ್ಣ ಅಂಗಡಿ, ಬಸವರಾಜ ಹೊಸಮನಿ, ಸಿದ್ದಣ್ಣ ದುರದುಂಡಿ, ಭೀಮಶಿ ಮಗದುಮ್ಮ, ಈರಪ್ಪ ರಾಮದುರ್ಗ, ಶಿವಪ್ಪ ಅಟಮಟ್ಟಿ, ಶಂಕರ ಬೋಳನ್ನವರ, ಶ್ರೀಶೈಲ ಅಂಗಡಿ, ಅಶೋಕ ಬಾಗಡಿ, ಗಿರಮಲ್ಲ ಸಂತಿ, ಎಂ ಬಿ ಛಬ್ಬಿ ಇದ್ದರು.

 

Home add -Advt

Related Articles

Back to top button