ಚಂದ್ರನೆಡೆಗೆ ಜಿಗಿದ ಬಾಹುಬಲಿ
ಪ್ರಗತಿವಾಹಿನಿ ಸುದ್ದಿ, ಶ್ರೀಹರಿಕೋಟಾ:
ಚಂದ್ರಯಾನ 2 -ಬಾಹುಬಲಿ ಚಂದ್ರನೆಡೆಗೆ ಯಶಸ್ವಿಯಾಗಿ ಜಿಗಿದಿದೆ.
ಶ್ರೀಹರಿಕೋಟದಲ್ಲಿ ಸ್ವಲ್ಪಹೊತ್ತಿನ ಮೊದಲು ನಡೆದ ಈ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ಚಂದ್ರನ ಮೇಲೆ ಇನ್ನು 48 ದಿನದಲ್ಲಿ ರಾಕೆಟ್ ಇಳಿಯಲಿದೆ. ಚಂದ್ರನ ದಕ್ಷಿಣ ಭಾಗವನ್ನು ಸೆಪ್ಟಂಬರ್ 6ರ ಹೊತ್ತಿಗೆ ಪ್ರವೇಶಿಸಲಿದೆ.
ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-2’ ಸೋಮವಾರ ಮಧ್ಯಾಹ್ನ 2.43ರ ವೇಳೆಗೆ ಉಡಾವಣೆಯಾಗಿದೆ.
ಚಂದ್ರಯಾನ-2 ಯೋಜನೆಯ ಉಡಾವಣೆ ಜುಲೈ 15ರಂದೇ ನಡೆಯಬೇಕಿತ್ತು. ಅಂದು ಮಧ್ಯರಾತ್ರಿ 2.51 ನಿಮಿಷಕ್ಕೆ ಸರಿಯಾಗಿ ಉಡಾವಣೆಗೊಳ್ಳಬೇಕಿತ್ತು. ಆದರೆ, ಅದಕ್ಕೂ 56 ನಿಮಿಷ 24 ಸೆಕೆಂಡ್ ಮುನ್ನವಷ್ಟೇ ತಾಂತ್ರಿಕ ಕಾರಣಗಳಿಂದ ಚಂದ್ರಯಾನದ ಉಡಾವಣೆ ಮುಂದೂಡಲಾಗಿದೆ ಎಂದು ಇಸ್ರೋ ಘೋಷಿಸಿತ್ತು.
ಇಡೀ ಭಾರತವೇ ಹೆಮ್ಮೆಪಡುವ ಕ್ಷಣ ಇದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ