Belagavi NewsBelgaum NewsKannada NewsKarnataka NewsLatest
*ಶುಕ್ರವಾರ ಮತ್ತು ಶನಿವಾರ ಖಾನಾಪುರ ತಾಲ್ಲೂಕಿನ ಈ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದ 110 ಕೆವಿ ಉಪಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ ಶುಕ್ರವಾರ ಸೆ.15 ಮತ್ತು ಶನಿವಾರ ಸೆ.16ರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೀಡಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಿಂಡಲಗಿ, ಮಂಗೇನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಾಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ ಹಂದೂರ-ಹುಲಿಕೊತ್ತಲ, ಕಸಮಳಗಿ, ಮುಗಳಿಹಾಳ, ಕಡತನ ಬಾಗೇವಾಡಿ, ಬಿಳಕಿ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಹಲಶಿ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.