Cancer Hospital 2
Beereshwara 36
LaxmiTai 5

*ಚನ್ನಗಿರಿ ಗಲಭೆ ಪ್ರಕರಣ: ಆರೋಪಿ ಸಾವಿನ ರಹಸ್ಯ ಬಯಲು* 

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಮಟ್ಕಾ ದಂಧೆ ಆರೋಪಿ ಆದಿಲ್​​ ಲಾಕಪ್​​ ನಲ್ಲಿ ​​ ಸಾವನ್ನಪ್ಪಿಲ್ಲ ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.‌

ಮೇ 24ರಂದು ಇಡೀ ರಾಜ್ಯದಲ್ಲೇ ಸುದ್ದಿಯಾಗಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್​​ ಠಾಣೆಯಲ್ಲಿ ಮಟ್ಕಾ ದಂಧೆ ಆರೋಪಿ ಆದಿಲ್​​ ಸಾವು ಪ್ರಕರಣ ಸಂಬಂಧ ಆರೋಪಿಯ ಲಾಕಪ್ ​​ ಡೆತ್​​ ಆಗಿಲ್ಲ, ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.

Emergency Service

ಪೊಲೀಸ್ ಠಾಣೆಯಲ್ಲಿದ್ದ  ಆರೋಪಿ ಆದಿಲ್​ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಆದಿಲ್ ಮನೆಯವರು ಇದು ಸಹಜ ಸಾವಲ್ಲ, ಲಾಕಪ್ ಡೆತ್ ಎಂದು ಗಂಭೀರ ಆರೋಪ ಮಾಡಿದ್ದರು.‌ 30ಕ್ಕೂ ಹೆಚ್ಚು ಜನರಿಂದ ಕಲ್ಲು ತೂರಾಟ ನಡೆದಿತ್ತು. ಆ ವೇಳೆ ಠಾಣೆಯ ಕಿಟಕಿ, ಗಾಜು ಒಡೆದು ಪೊಲೀಸ್​​ ವಾಹನಗಳಿಗೆ ಹಾನಿ ಮಾಡುವಷ್ಟರ ಮಟ್ಟಿಗೆ ಘಟನೆ ತಿರುವು ಪಡೆದಿತ್ತು. ವಿರೋಧ ಪಕ್ಷಗಳು ಈ ಘಟನೆಯನ್ನು ರಾಜಕೀಯವಾಗಿ ಟೀಕಿಸಿದ್ದವು.

ಇದೀಗ ಮರಣೋತ್ತ ಪರೀಕ್ಷೆಯ ವರದಿ ಬಂದಿದ್ದು, ಹೃದಯಾಘಾತದಿಂದ ಆದಿಲ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇನ್ನು ಜಡ್ಜ್​ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ವರದಿಯಾಗಿದೆ. ಸದ್ಯ ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.

Bottom Add3
Bottom Ad 2