
ಪ್ರಗತಿವಾಹಿನಿ ಸುದ್ದಿ: ಖಾನಾಪುರ: ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ಶಾಸಕರಾದ ವಿಠ್ಠಲ ಹಲಗೇಕರ್, ಡಾ.ಜವಳಿ, ಜ್ಞಾನೇಶ್ವರ ಪಾಲೇಕರ್, ಮಲ್ಲಿಕಾರ್ಜುನ ಇನಾಮದಾರ್, ಮುಸ್ತಫಾ ದಫೆದಾರ್, ಸಂತೋಷ ಕಸಿಲಕರ್, ವೀರೇಶ್ ಕೊಳ್ಳಿ, ಪರಶುರಾಮ ಕಂಗ್ರಾಳಕರ್, ಸದ್ದಾಂ ಬೇಫಾರಿ, ಇಸ್ತಾಕ್ ಇಟಗಿ ಉಪಸ್ಥಿತರಿದ್ದರು.