Kannada NewsKarnataka NewsLatest
ಜಂಗೀ ಕುಸ್ತಿ ಪಂದ್ಯಾವಳಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ; ಯುವಕರ ಉತ್ಸಾಹಕ್ಕೆ ಫಿದಾ ಆದ ಶಾಸಕ, ಪ್ರಥಮ ಬಹುಮಾನ ಪ್ರಾಯೋಜಕತ್ವ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ ಎಚ್ ಗ್ರಾಮದ ಶ್ರೀ ಬಾಲ ಹನುಮಾನ ತಾಲಿಮ ಮಂಡಳ ಹಾಗೂ ಕುಸ್ತಿ ಸಂಘಟನಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಂಗೀ ಕುಸ್ತಿಪಂದ್ಯಾವಳಿಯನ್ನು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.

ಗ್ರಾಮೀಣ ಯುವಕರ ಉತ್ಸಾಹ ಕಂಡು ಖುಷಿಯಾಗುತ್ತಿದೆ. ನಿಮ್ಮ ಖುಷಿಯಲ್ಲಿ ಭಾಗಿಯಾಗಲು ನನಗೂ ಸಂತೋಷವೆನಿಸುತ್ತಿದೆ. ನಿಮ್ಮೆಲ್ಲ ಚಟುವಟಿಕೆಯಲ್ಲಿ ನಾವು ಜೊತೆಯಾಗಿರುತ್ತೇವೆ. ಸದಾ ಕ್ರಿಯಾಶೀಲ ಚಟುವಟಿಕೆಯನ್ನು ಮುಂದುವರಿಸಿ ಎಂದು ಅವರು ಹುರುದುಂಬಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ