Kannada NewsKarnataka News

ಶ್ರಾವಣ ಮಾಸದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚನ್ನರಾಜ ಹಟ್ಟಿಹೊಳಿ

ಹಿರೇಬಾಗೇವಾಡಿ ಅಭಿವೃದ್ಧಿಗೆ ಹಲವು ಯೋಜನೆ ಹಾಕಿಕೊಂಡಿರುವ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಹಿರೇಬಾಗೇವಾಡಿ – ​  ಹಿರೇಬಾಗೇವಾಡಿ ಗ್ರಾಮದ ಜಗನ್ಮಾತೆ ಶ್ರೀ ಜಾಲಿಕರೆಮ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಶ್ರಾವಣ ಮುಕ್ತಾಯ ಸಮಾರಂಭದಲ್ಲಿ ಲಕ್ಷ್ಮಿ ತಾಯಿ ಕೋ ಆಪರೇಟಿವ್ ಸೊಸೈಟಿ ಚೇರಮನ್ ಹಾಗೂ ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿದ್ದರು.
 ಪ್ರತಿ ವರ್ಷವೂ ಹಿರೇಬಾಗೇವಾಡಿಯಲ್ಲಿ ಶ್ರಾವಣ ಮಾಸದ ಕಾರ್ಯಕ್ರಮ ಅತ್ಯಂತ ಸುಂದರವಾಗಿ ನಡೆಯುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಭಾಗ್ಯ. ಇಲ್ಲಿಯ ಜನರ ಮೇಲೆ ಜಾಲಿ ಕರೆಮ್ಮ ದೇವಿಯ ಆಶಿರ್ವಾದ ಸದಾ ಇರಲಿ ಎಂದು ಚನ್ನರಾಜ ಪ್ರಾರ್ಥಿಸಿದರು.
   ಹಿರೇಬಾಗೇವಾಡಿ ಬೆಳಗಾವಿಯ ಹೆಬ್ಬಾಗಿಲು ಇದ್ದಂತೆ. ಲಕ್ಷ್ಮಿ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಗ್ರಾಮದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ತಂದಿದ್ದಾರೆ. ಇಲ್ಲಿಯ ಜನರ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ.  ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆ ಹಮ್ಮಿಕೊಳ್ಳಲು ಲಕ್ಷ್ಮಿ ಹೆಬ್ಬಾಳಕರ್ ಅವರು ನಿರ್ಧರಿಸಿದ್ದಾರೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು. 
​ ಜಾಲಿಕರೆಮ್ಮ ದೇವಿಯ ಆರಾಧಕರಾದ ಉಳವಪ್ಪ ಅಜ್ಜನವರು,  ಶ್ರೀ ನಾಗೇಂದ್ರ ಮಹಾಸ್ವಾಮಿಗಳು, ಅರಳಿಕಟ್ಟಿಯ ತೋಂಟದಾರ್ಯ ಶ್ರೀ ಶಿವಮೂರ್ತಿ ದೇವರು (ವಿರಕ್ತಮಠ), ಶ್ರೀ ಶಿವಾನಂದ ಶಿವಾಚಾರ್ಯರು ಕೇದಾರ ಪೀಠ ಮುತ್ನಾಳ ಇವರುಗಳು ದಿವ್ಯ ಸಾನಿಧ್ಯದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಿದವು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಿ ಎನ್. ಪಾಟೀಲ, ಶ್ರೀಕಾಂತ ಮದುಭರಮಣ್ಣವರ, ಸುರೇಶ ಇಟಗಿ, ಗೌಸ್ ಜಾಲಿಕೊಪ್ಪ, ಅಡಿವೇಶ ಇಟಗಿ, ಎನ್ ಎಫ್ ಕಂಠಿ, ಈರಣ್ಣ ಅರಳಿಕಟ್ಟಿ, ಬಸನಗೌಡ ಪಾಟೀಲ, ಬಸವರಾಜ ಹುಲಮನಿ, ಅನಿಲ್ ಪಾಟೀಲ, ಎನ್ ಸಿ ಪಾಟೀಲ, ಅಡಿವೆಪ್ಪ ತೋಟಗಿ, ಸಂತೋಷ ಕಾಕತಿ, ಮಂಜು ಕುಂಬಾರ​ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button