LatestUncategorized

*ಸಹನಟನಿಗೆ ಲಕ್ಷಾಂತರ ರೂಪಾಯಿ ವಂಚನೆ; ಕಿರುತೆರೆ ಖ್ಯಾತ ನಟಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ವಂಚನೆ ಪ್ರಕರಣ ಸಂಬಂಧ ಸಿನಿಮಾ ಹಾಗೂ ಧಾರಾವಾಹಿಗಳ ನಟಿ ಉಷಾ ರವಿಶಂಕರ್ ಅವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಧಾರವಾಹಿ ನಟ ಶಿವಮೊಗ್ಗ ಮೂಲದ ಶರವಣನ್ ಎಂಬುವವರು ಬೆಂಗಳೂರಿನ ಸಹಕಲಾವಿದೆ ಉಷಾ ರವಿಶಂಕರ್ ಅವರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು ಎನ್ನಲಾಗಿದೆ. ಫೇಸ್ ಬುಕ್ ಮೂಲಕ ಪರಿಚಯ ಇಬ್ಬರು ಸಹಕಲಾವಿದರ ನಡಿವೆ ಸ್ನೇಹ ಮದುವೆ ಪ್ರಸ್ತಾಪದವರೆಗೂ ಹೋಗಿದೆ. ಮದುವೆಯಾಗುವುದಾಗಿ ಹೇಳಿ ಉಷಾ ಶರವಣನ್ ನಿಂದ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಭೇಟಿಯಾದಾಗಲೆಲ್ಲ ಉಷಾ ಹಣಕ್ಕೆ ಬೇಡಿಕೆ ಇಡುತ್ತಿದ್ದುದು ಅಲ್ಲದೇ, ಶರವಣನ್ ಕ್ರೆಡಿಟ್ ಕಾರ್ಡ್ ಮೂಲಕವೂ ಹಣ ಡ್ರಾ ಮಾಡಿಕೊಂಡಿದ್ದಳು ಎಂಬ ಆರೋಪ ಕೇಳಿಬಂದಿದೆ. 2022ರಲ್ಲಿ ಶರವಣನ್ ಶಿವಮೊಗ್ಗದ ವಿನೋಭಾನಗರ ಠಾಣೆಯಲ್ಲಿ ಉಷಾ ರವಿಶಂಕರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ನಟಿಗೆ ನೋಟೀಸ್ ನೀಡಲು ಅಡ್ರೆಸ್ ಸಮಸೆ ಎದುರಾಗಿತ್ತು. ಆದರೆ ವಾಟ್ಸಪ್ ಮೂಲಕವೇ ಕೋರ್ಟ್ ನಟಿಗೆ ನೋಟೀಸ್ ನೀಡಿತ್ತು.

ಆರಂಭದಲ್ಲಿ ಕೊರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದ ನತಿ ಬಳಿಕ ಹಾಜರಾಗಿರಲಿಲ್ಲ. ಇದರಿಂದ ವಿನೋಭಾ ನಗರ ಪೊಲೀಸರು ಉಷಾ ರವಿಶಂಕರ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಮಹಿಳೆ ಎಂಬ ಕಾರಣಕ್ಕೆ ಆರೋಪಿ ಉಷಾ ಅವರಿಗೆ ನ್ಯಾಯಾಧೀಶೆ ಶೃತಿ ಜಾಮೀನು ಮಂಜೂರು ಮಾಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button