Karnataka News

*ಕೆಮಿಕಲ್ ಡಂಪ್ ವೇಳೆ ದುರಂತ: ಉಸಿರುಗಟ್ಟಿ ಕಾರ್ಮಿಕ ಸಾವು*

ಪ್ರಗತಿವಾಹಿನಿ ಸುದ್ದಿ: ಕೆಮಿಕಲ್ ಡಂಪ್ ಮಡುವ ವೇಳೆ ಉಸಿರುಗಟ್ಟಿ ಕಾರ್ಮಿಕ ಸಾವನ್ನಪ್ಪಿರುವ ಗಹ್ಟನೆ ಚಿಕ್ಕಬಳ್ಳಾಪೌರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ಶ್ರೀನಾವಸಮೂರ್ತಿ ಎಂಬುವವರಿಗೆ ಸೇರಿದ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಕೆಮಿಕಲ್ ಲಾರಿಗೆ ತುಂಬುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಲಾರಿ ಮೇಲ್ಭಾಗದ ಕ್ಯಾಪ್ ಓಪನ್ ವೇಳೆ ಅವಘಡ ಸಂಭವಿಸಿದ್ದು, ಈ ವೇಳೆ ಉಸಿರುಗಟ್ಟಿ ಮೂವರು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ.

ಬಿಹಾರ ಮೂಲದ ಮೊಹಮ್ಮದ್ ಮೃತರು. ಅಸ್ವಸ್ಥರನ್ನು ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರಲ್ಲಿ ಓರ್ವ ಚೇತರಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button