Film & Entertainment

*ನಟ ಚೇತನ್ ಚಂದ್ರ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ನಟ ಸೇರಿದಂತೆ ಮೂವರ ವಿರುದ್ಧವೇ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ನಟ ಚೇತನ್ ಚಂದ್ರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಬಧಿಸಿದ್ದಾರೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ ಚಂದ್ರ ಸೇರಿದಂತೆ ಮೂವರ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ.

ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಕಿರಣ್ ಹಾಗೂ ಹರೀಶ್ ಎಂಬುವವರನ್ನು ಬಂಧಿಸಿದ್ದರು. ಹಲ್ಲೆಗೊಳಗಾಗಿರುವ ಚೇತನ್ ಚಂದ್ರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಹಲ್ಲೆ ಪ್ರಕರಣ ಸಂಬಂಧ ಚೇತನ್ ಚಂದ್ರ ಹಾಗೂ ಅವರ ಜೊತೆಗಿದ್ದ ಇನ್ನಿಬ್ಬರ ವಿರುದ್ಧ ಪ್ರತಿ ದೂರು ದಾಖಲಾಗಿದೆ.

ಹಲ್ಲೆ ಆರೋಪದಲ್ಲಿ ಬಂಧಿಸಲ್ಪಟ್ಟ ಕಿರಣ್ ಪತ್ನಿ ಐಶ್ವರ್ಯಾ ಎಂಬುವವರು ಚೇತನ್ ವಿರುದ್ಧ ದೂರು ದಾಖಲಿಸಿದ್ದಾರೆ. ನಿನ್ನೆ ರತರಿ ಬೈಕ್ ನಲ್ಲಿ ಬರುವಾಗ ಸೈಡ್ ತೆಗೆದುಕೊಂಡಿದ್ದಕ್ಕೆ ಚೇತನ್ ಚಂದ್ರ ಕೋಪಗೊಂಡು ಮಧ್ಯದ ಬೆರಳು ತೋರಿಸಿದ್ದಾರೆ. ಬಳಿಕ ನನ್ನ ಪತಿ ಬೇಕರಿ ಬಳಿ ಬೈಕ್ ನಿಲ್ಲಿಸುತ್ತಿದ್ದಂತೆ ಹಿಂದಿನಿಂದ ಬಂದು ಬೈಕ್ ಗುದ್ದಿದ್ದಾರೆ. ಈ ವೇಳೆ ನಾನು ಹೋಗಿ ಕ್ಷಮೆ ಕೇಳಿದರೂ ನನ್ನ ಮೇಲೂ ಚೇತನ್ ಹೊಡೆದಿದ್ದಾರೆ. ನನ್ನ ಮೇಲೆ ಹೊಡೆಯುತ್ತಿದ್ದಂತೆ ಜನ ಸೇರಿದ್ದು ಜನರು ಚೇತನ್ ಗೆ ಹೊಡೆದಿದ್ದಾರೆ. ಮೊದಲು ಚೇತನ್ ನನಗೂ ಹಾಗೂ ನನ್ನ ಪತಿ ಮೇಲೇ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚೇತನ್ ಚಂದ್ರ ಹಾಗೂ ಅವರ ಜೊತೆಗಿದ್ದ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 323, 354, 34ರಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.


Related Articles

Back to top button