GIT add 2024-1
Beereshwara 33

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ: ಸಂಚಾರಿ ಮಾರ್ಗ ಬದಲಾವಣೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶನಿವಾರ ನಡೆಯುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮಧ್ಯಾಹ್ನ 2 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.‌

ಮೆರವಣಿಗೆಯು ನಗರದ ನರಗುಂದಕರ ಭಾವೆ ಚೌಕದಿಂದ ಪ್ರಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಶ್ರೀ ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ ರಸ್ತೆ, ಸಾಮ್ರಾಟ ಅಶೋಕ ಚೌಕ, ಟಿಳಕ ಚೌಕ, ಹೇಮುಕಲಾನಿ ಚೌಕ, ಶನಿ ಮಂದಿರ, ಕಪಿಲೇಶ್ವರ ಪ್ಲೈ ಓವರ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.

ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡಗೆ ಸಾಗುವ ವಾಹನಗಳ ಚಾಲಕ/ಸವಾರರು ಚನ್ನಮ್ಮ ವೃತ್ತ ಗಣೇಶ ಮಂದಿರ ಹಿಂದೆ ಬಲತಿರುವ ಪಡೆದುಕೊಂಡು ಕ್ಲಬ್ ರಸ್ತೆ ಮೂಲಕ ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ್ (ಮಿಲ್ಟಿ ಆಸ್ಪತ್ರೆ), ಕೇಂದ್ರಿಯ ವಿದ್ಯಾಲಯ, ಶರ್ಕತ್ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆ ಮೂಲಕ ಪ್ರಯಾಣಿಸಬೇಕು.‌

ಜೀಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ, ಕಂಬಳಿ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ವಾಹನಗಳು ಜೀಜಾ ಮಾತಾ ಸರ್ಕಲ್‌ದಿಂದ ನೇರವಾಗಿ ಹಳೆ ಪಿಬಿ ರಸ್ತೆಯ ಮೂಲಕ ಪ್ರಯಾಣಿಸಬೇಕು.‌

ಗೋವಾವೇಸ್ ಸರ್ಕಲ್ ಹಾಗೂ ನಾಥಪೈ ಸರ್ಕಲ್ ಕಡೆಯಿಂದ ಬ್ಯಾಂಕ ಆಫ್ ಇಂಡಿಯಾ ಮಾರ್ಗವಾಗಿ ಕಪಿಲೇಶ್ವರ ಪ್ಲೈ ಓವರ್ ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಬ್ಯಾಂಕ ಆಫ್ ಇಂಡಿಯಾ ಸರ್ಕಲ್ ದಿಂದ ಶಿವ ಚರಿತ್ರೆ (ಕುಲಕರ್ಣಿ ಗಲ್ಲಿ) ರಸ್ತೆ, ವೈಭವ ಹೊಟೇಲ್ ಕ್ರಾಸ್, ಹಳೆ ಪಿಬಿ ರಸ್ತೆ ಸೇರಿ ಮುಂದೆ ಸಾಗುವುದು.

ಹಳೆ ಪಿಬಿ ರಸ್ತೆ, ವಿ.ಆರ್.ಎಲ್ ಲಾಜಿಸ್ಟಿಕ್, ಭಾತಕಾಂಡೆ ಸ್ಕೂಲ್ ಕ್ರಾಸ್ ಮಾರ್ಗವಾಗಿ ಕಪಿಲೇಶ್ವರ ಪ್ಲೈ ಓವರ್ ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಭಾತಕಾಂಡೆ ಸ್ಕೂಲ್ ಕ್ರಾಸ್ ಹತ್ತಿರ ಎಡತಿರುವ ಪಡೆದುಕೊಂಡು ಶಿವಾಜಿ ಗಾರ್ಡನ, ಬ್ಯಾಂಕ್ ಆಫ್ ಇಂಡಿಯಾ ಕ್ರಾಸ್. ಮಹಾತ್ಮಾ ಫುಲೆ ರಸ್ತೆ ಮಾರ್ಗವಾಗಿ ಸಂಚರಿಸಬೇಕು.

Emergency Service

ಹಳೆ ಪಿಬಿ ರಸ್ತೆ, ಯಶ್ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಮೂಲಕ ಕಪಿಲೇಶ್ವರ ಪ್ಲೈ ಓವರ್ ರಸ್ತೆ ಕಡೆಗೆ ಸಾಗುವ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ/ಬಲ ತಿರುವು ಪಡೆದುಕೊಂಡು ಭಾತಕಾಂಡೆ ಸ್ಕೂಲ್/ತಾನಾಜಿ ಗಲ್ಲಿ ರೇಲ್ವೆ ಗೇಟ್ ಮೂಲಕ ಮುಂದೆ ಸಾಗುವದು.

ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಪ್ಲೈ ಓವರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಎಸ್‌ಪಿಎಮ್ ರಸ್ತೆ ಕಡೆಗೆ ಸಂಚರಿಸದೇ ಮರಾಠಾ ಮಂದಿರ ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.

ಖಾನಾಪೂರ ರಸ್ತೆ, ಬಿಎಸ್‌ಎನ್‌ಎಲ್ ಕ್ರಾಸ್, ಸ್ಟೇಶನ್ ರಸ್ತೆ ಹಾಗೂ ಗೋಗಟೆ ಸರ್ಕಲ್ ಕಡೆಯಿಂದ ರೇಲ್ವೆ ಸ್ಟೇಶನ, ಪೋಸ್ಟಮನ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ಸಂಚರಿಸುವ ವಾಹನಗಳು ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ್ ಪಾರ್ಕ, ಕೇಂದ್ರಿಯ ವಿದ್ಯಾಲಯ, ಶೌರ್ಯ ಚೌಕ (ಮಿಲ್ಟಿ ಆಸ್ಪತ್ರೆ) ಗಾಂಧಿ ಸರ್ಕಲ್ (ಅರಗನ ತಲಾಬ), ಕ್ಲಬ್ ರಸ್ತೆ, ಚನ್ನಮ್ಮಾ ಸರ್ಕಲ್ ಸೇರಿ ಮುಂದೆ ಸಾಗುವುದು.

ಮೆರವಣಿಗೆ ಸಾಗುವ ಮಾರ್ಗವಾದ ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮ ಚೌಕ. ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಧರ್ಮವೀರ ಸಂಭಾಜಿ ವೃತ್ತ. ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಾಲನಿ ಚೌಕ. ಶನಿಮಂದಿರ, ರೇಣುಕಾ ಹೊಟೇಲ್, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ ನಾಳೆ ಮಧ್ಯಾಹ್ನ 2 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಮೆರವಣೆಗೆ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಬೋಗಾರವೇಸ್ ಸರ್ಕಲ್ ದಿಂದ 4 ಗಂಟೆಗೆ ಡೈವರ್ಶನ್ ಮಾಡಲಿದ್ದು ವಾಹನಗಳನ್ನು ಆ ರಸ್ತೆ ಬದಲಿಗೆ ಬೇರೆ ರಸ್ತೆಯನ್ನು ಬಳಸಲು ಸೂಚಿಸಲಾಗಿದೆ. ಪಾರ್ಕಿಂಗ ವ್ಯವಸ್ಥೆಯನ್ನು ಸರದಾರ ಗೌಂಡ್‌ನಲ್ಲಿ ನಿಯೋಜಿಸಿದ್ದು ವಾಹನಗಳನ್ನು ಇಲ್ಲಯೆ ನಿಲ್ಲಿಸಿ ಕಾಲು ನಡಿಗೆಯಲ್ಲಿ ಯಂಡಿಖೂಟ ಕಡೆ ಬರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Laxmi Tai add
Bottom Add3
Bottom Ad 2