ಬೆಚ್ಚಿ ಬೇಳಿಸುತ್ತುವಂತಿದೆ ಮೋಸ್ಟ್ ಮಾರ್ಟಮ್ ರಿಪೋರ್ಟ್
ಪ್ರಗತಿವಾಹಿನಿ ಸುದ್ದಿ: ರಸ್ತೆ ಕಾಮಗಾರಿಯಲ್ಲಿ ನಡೆದಿದ್ದ ಭ್ರಷ್ಟಚಹಾರ ಪ್ರಕರಣವನ್ನು ಬಯಲಿಗೆಳೆದಿದ್ದ ಪತ್ರಕರ್ತ ಮುಖೇಶ್ ಚಂದ್ರಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಛತ್ತೀಸ್ ಗಡದ ರಸ್ತೆ ಗುತ್ತಿಗೆಯಲ್ಲಿ ನಡೆದ 120 ಕೋಟಿ ಭ್ರಷ್ಟಾಚಾರವನ್ನು ಯುವ ಪತ್ರಕರ್ತ ಮುಖೇಶ್ ಚಂದ್ರಾಕರ್ ಬಯಲು ಮಾಡಿದ್ದರು. ಹಗರಣ ಬಯಲಿಗೆಳೆದ ಬೆನ್ನಲ್ಲೇ ಪತ್ರಕರ್ತನ ಬರ್ಬರ ಹತ್ಯೆಯಾಗಿತ್ತು. ಇದೀಗ ಪತ್ರಕರ್ತನ ಮರಣೋತ್ತರ ಪರೀಕ್ಷಾವರದಿ ಬಯಲಾಗಿದ್ದು, ಹತ್ಯೆಯ ಕ್ರೂರತೆಯನ್ನು ಬಿಚ್ಚಿಟ್ಟಿದೆ.
ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪತ್ರಕರ್ತನ ತಲೆಯ ಮೂಳೆಗಳು 15 ಕಡೆ ಮುರಿದಿದೆ, ಹೃದಯ ತುಂದಾಗಿದ್ದು, ಲಿವರ್ 4 ತುಂಡಾಗಳನನಗಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಪತ್ರಕರ್ತನ ದೂರದ ಸಂಬಂಧಿ ಹಾಗೂ ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಅನೆಯ ಸೆಪ್ಟಿಕ್ ಟ್ಯಾಂಕ್ ನಲ್ಲಿ ಮುಖೇಶ್ ಮೃತದೇಹ ಪತ್ತೆಯಾಗಿತ್ತು. ಇದೀಗ ಆರೋಪಿ ಸುರೇಶ್ ನನ್ನು ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ